ಹಲ್ದಿಯಾ: ಪಶ್ಚಿಮ ಬಂಗಾಳದ ಒಂದೆಡೆ ಉಷ್ಣತೆ ತೀವ್ರಮಟ್ಟದಲ್ಲಿ ಏರುಗತಿಯಲ್ಲಿ ಸಾಗಿರುವ ಬೆನ್ನಲ್ಲೇ, ಇಲ್ಲಿಯ ಹಲ್ದಿಯಾದಲ್ಲಿ ಇದ್ದಕ್ಕಿದ್ದಂತೆ ಸುಂಟರಗಾಳಿ ಕಾಣಿಸಿಕೊಂಡ ಘಟನೆ ನಡೆದಿದೆ.
ಹಲವಾರು ನಿಮಿಷಗಳವರೆಗೆ ಸುಂಟರಗಾಳಿ ಭಯಾನಕ ವಾತಾವರಣವನ್ನು ಸೃಷ್ಟಿಸಿತ್ತು. ಹಲ್ದಿಯಾ ಕೈಗಾರಿಕಾ ಪ್ರದೇಶದ ಸಿಟಿ ಸೆಂಟರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಏಕಾಏಕಿ ಕಂಡು ಬಂದ ಸುಂಟರಗಾಳಿಗೆ ದಾರಿಹೋಕರು ಭಯಭೀತರಾದರು. ಕೆಲವರು ಈ ದೃಶ್ಯವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.
ಸ್ಥಳೀಯ ಮೂಲಗಳ ಪ್ರಕಾರ, ಭಾನುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಹಲ್ದಿಯಾದ ಸಿಟಿ ಸೆಂಟರ್ ಪ್ರದೇಶದಲ್ಲಿ ಸುಂಟರಗಾಳಿ ಕಾಣಿಸಿಕೊಂಡಿದೆ. ಚಂಡಮಾರುತವು ನೆಲದಿಂದ ಧೂಳನ್ನು ಎತ್ತರವರೆಗೆ ಎಸೆಯುವಂತೆ ಭಾಸವಾಗಿತ್ತು. ಹವಾಮಾನಶಾಸ್ತ್ರಜ್ಞರ ಪ್ರಕಾರ, ವಿಪರೀತ ಶಾಖದಿಂದ ಬಿಸಿಯಾದ ಗಾಳಿಯು ಶೂನ್ಯಕ್ಕೆ ಏರಿದಾಗ ಹೀಗಾಗುತ್ತದೆ ಎಂದಿದ್ದಾರೆ.