ಪೆಟ್ರೋಲ್ ಬೆಲೆಯು ಭಾರಿ ದುಬಾರಿ, ನಿತ್ಯ ದ್ವಿಚಕ್ರ ವಾಹನ ಸಂಚಾರ ಮಾಡುವವರ ಕಷ್ಟ ಹೇಳತೀರದು. ಎರಡು ದಿನಕ್ಕೆ ಒಮ್ಮೆ 200 ರೂ. ಪೆಟ್ರೋಲ್ ಭರ್ತಿ ಮಾಡಿಸಬೇಕಾಗಿದೆ. ಎಲೆಕ್ಟ್ರಿಕ್ ಸ್ಕೂಟರ್‌ವೊಂದನ್ನು ಖರೀದಿ ಮಾಡೋಣವೆಂದರೆ, ಅವುಗಳಲ್ಲಿ ಯಾವುದನ್ನು ಆಯ್ಕೆ ಮಾಡಬೇಕು ಎನ್ನುವ ಗೊಂದಲ ಕಾಡುತ್ತಿದೆ. ಇಂಥ ಸಂದಿಗ್ಧ ಪರಿಸ್ಥಿತಿಯ ಭಾರತದ ಮಾರುಕಟ್ಟೆಗೆ ದೇಶೀಯ ಎಲೆಕ್ಟ್ರಿಕ್ ಬೈಕ್‌ವೊಂದನ್ನು ಪರಿಚಯಿಸಲಾಗುತ್ತಿದೆ.
2016ರಲ್ಲಿ ಭಾರತದ ಮೊದಲ ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಪ್ರದರ್ಶಿಸಿದ್ದ ಟಾರ್ಕ್ ಮೋಟಾರ್ಸ್ ಕಡೆಯಿಂದ ಟಿ6ಎಕ್ಸ್ ಬೈಕ್ ಭಾರತದ ದ್ವಿಚಕ್ರ ವಾಹನ ಸವಾರರಿಗೆ ಪರಿಚಯಿಸಲಾಗುತ್ತಿದೆ.
ಇದಕ್ಕೆ ’ಕ್ರೆಟೋಸ್’ ಎಂದು ನಾಮಕರಣ ಮಾಡಲಾಗಿದೆ. ಇದೇ ತಿಂಗಳು ಬುಕ್ಕಿಂಗ್ ಶುರುವಾಗಲಿದೆ. ಸದ್ಯ ಮಾರುಕಟ್ಟೆಯಲ್ಲಿರುವ ರಿವೊಲ್ಟ್ ಆರ್‌ವಿ 400 ಬೈಕ್‌ಗೆ ಪ್ರಬಲ ಪೈಪೋಟಿಯು ಟಿ6ಎಕ್ಸ್ ನೀಡಲಿದೆ ಎನ್ನುವುದು ಕಂಪನಿಯ ನಂಬಿಕೆ.
ದೆಹಲಿಯಲ್ಲಿ 1 ಲಕ್ಷಕ್ಕೂ ಹೆಚ್ಚು ಡೀಸೆಲ್ ವಾಹನಗಳ ನೋಂದಣಿ ರದ್ದು
ಗಂಟೆಗೆ 100 ಕಿ.ಮೀ. ವೇಗದಲ್ಲಿ ಚಲಿಸುವ ಗರಿಷ್ಠ ಸಾಮರ್ಥ್ಯವನ್ನು ಟಿ6ಎಕ್ಸ್ ಹೊಂದಿದೆ. ಜತೆಗೆ ಒಂದು ಬಾರಿ ಬ್ಯಾಟರಿಯನ್ನು ಪೂರ್ಣ ಚಾರ್ಜ್ ಮಾಡಿದರೆ, 100 ಕಿ.ಮೀ. ಸಂಚರಿಸಬಹುದಾಗಿದೆ. ಒಳ್ಳೆಯ ಸ್ಪೋರ್ಟ್ಸ್ ವಿನ್ಯಾಸದಲ್ಲಿ ಬೈಕ್ ತಯಾರಿಸಲಾಗಿದೆ. ಇದು ಜನರ ಮನಸ್ಸಿಗೆ ಹತ್ತಿರವಾಗಲಿದೆ ಎಂದು ಕಂಪನಿಯ ಸಿಇಒ ಕಪಿಲ್ ಶಿಲ್ಕೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.