ನೋಡನೋಡುತ್ತಲೇ 2022 ಇನ್ನೇನು ಶುರುವಾಗಲಿದೆ. ಭಾರತೀಯ ಆಟೋಮೊಬೈಲ್ ಉದ್ಯಮವು ಬರುವ ವರ್ಷದಲ್ಲಿ ಥರಾವರಿ ಹೊಸ ಕಾರುಗಳನ್ನು ಬಿಡುಗಡೆ ಮಾಡಲಿದೆ.
ಕೋವಿಡ್ ಹೊಡೆತದಿಂದ ಆರ್ಥಿಕತೆ ನಿಧಾನವಾಗಿ ಚೇತರಿಕೆ ಕಾಣುತ್ತಿರುವ ನಡುವೆಯೇ ದೇಶದ ಬಹಳಷ್ಟು ಮಂದಿ ತಮ್ಮ ಕನಸಿನ ಕಾರುಗಳನ್ನು ಖರೀದಿ ಮಾಡಲು ನೋಡುತ್ತಿದ್ದಾರೆ. ಅದರಲ್ಲೂ, 15 ಲಕ್ಷ ರೂ.ಗಳ ಮಿತಿಯ ಕಾರುಗಳ ಮಾರಾಟಕ್ಕೆ ದೇಶದಲ್ಲಿ ಒಳ್ಳೆ ಬೇಡಿಕೆ ಇದೆ. ಈ ಕೆಟಗರಿಯಲ್ಲಿ, 2022ರಲ್ಲಿ ಲಾಂಚ್ ಆಗಲಿರುವ ಟಾಪ್ ಮಾಡೆಲ್‌ಗಳ ಬಗ್ಗೆ ಒಂದಿಷ್ಟು ವಿವರ.
BIG NEWS: ಶೇ. 100 ರಷ್ಟು ಲಸಿಕೆ ನೀಡಿಕೆಯೊಂದಿಗೆ ಮೈಸೂರು ನಗರದಲ್ಲಿ ಅಭಿಯಾನ ಯಶಸ್ವಿ
ಕಿಯಾ ಕಾರೆನ್ಸ್
ಮುಂಬರುವ ದಿನಗಳಲ್ಲಿ, ಕಿಯಾ ಇಂಡಿಯಾ, ’ಕಾರೆನ್ಸ್’ ಹೆಸರಿನ ತನ್ನ ಬ್ರಾಂಡ್ ನ್ಯೂ ಎಂಪಿವಿಯನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಸೆಲ್ಟೋಸ್‌ನ ಪ್ಲಾಟ್‌ಫಾರಂನಲ್ಲಿಯೇ ಇರುವ ’ಕಾರೆನ್ಸ್’ ಬಹುತೇಕ ಅದೇ ಇಂಜಿನ್ ಆಯ್ಕೆಗಳನ್ನು ಹೊಂದಿರುವ ಸಾಧ್ಯತೆ ಇದೆ. ಕಾರೆನ್ಸ್‌ನ ಆರಂಭಿಕ ಬೆಲೆ 15 ಲಕ್ಷ ರೂ.ಗಳಷ್ಟಿರುವ ಸಾಧ್ಯತೆ ಇದೆ.
ನೆಕ್ಸ್ಟ್ ಜೆನ್ ಮಹಿಂದ್ರಾ ಸ್ಕಾರ್ಪಿಯೋ
ಸ್ಕಾರ್ಪಿಯೋದ ಎರಡನೇ ತಲೆಮಾರು 2022ರ ಮೊದಲರ್ಧದಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಹಳೆಯ ಮಾಡೆಲ್‌ಗೆ ಹೋಲಿಸಿದಲ್ಲಿ, ಈ ವಾಹನದ ಲುಕ್‌ನಲ್ಲಿ ಸಾಕಷ್ಟು ಮಾರ್ಪಾಡುಗಳಾಗಿವೆ. 2.0 ಲೀ ಟರ್ಬೋ ಪೆಟ್ರೋಲ್ ಮತ್ತು 2.2 ಲೀ ಟರ್ಬೋ ಡೀಸೆಲ್ ಇಂಜಿನ್‌ಗಳಲ್ಲಿ ಈ ವಾಹನ ತನ್ನ ಹೊಸ ಅವತಾರದಲ್ಲಿ ಎಂಟ್ರಿ ಕೊಡುವ ನಿರೀಕ್ಷೆ ಇದೆ. ನೆಕ್ಸ್ಟ್ ಜೆನ್ ಸ್ಕಾರ್ಪಿಯೋದ ಅಂದಾಜು ಬೆಲೆ 12 ಲಕ್ಷ ರೂ.ಗಳಷ್ಟಿದೆ.
ಮಹಿಂದ್ರಾ ಬೊಲೆರೊ ನಿಯೋ ಪ್ಲಸ್
ಮಹಿಂದ್ರಾದ ಟಿಯುವಿ300ಯ ಹೊಸ ವರ್ಶನ್ ಅನ್ನು ಈ ವರ್ಷದ ಆರಂಭದಲ್ಲಿ ಬಿಡುಗಡೆ ಮಾಡಲಾಗಿದ್ದು, ಬೊಲೆರೋ ನಿಯೋ ಎಂದು ಇದನ್ನು ಕರೆಯಲಾಗುತ್ತದೆ. ಟಿಯುವಿ300 ಪ್ಲಸ್ ಅನ್ನು ಮರಳಿ ತರುವ ಪ್ಲಾನ್‌ಗಳು ಸಹ ಮಹಿಂದ್ರಾ ಮುಂದೆ ಇದ್ದು, ಬೊಲೆರೋ ನಿಯೋ ಪ್ಲಸ್ ಹೆಸರಿನಲ್ಲಿ ಈ ಮಾಡೆಲ್ ಬರುವ ಸಾಧ್ಯತೆ ಇದೆ. 2.2 ಲೀ ಟರ್ಬೋ-ಡೀಸೆಲ್ ಇಂಜಿನ್‌ನಿಂದ ಚಾಲಿತವಾಗಲಿರುವ ಈ ವಾಹನ 122ಪಿಎಸ್ ಬಲ ಮತ್ತು 280ಎನ್‌ಎಂನಷ್ಟು ಟಾರ್ಕ್ ಉತ್ಪತ್ತಿ ಮಾಡಲಿದ್ದು, 6-ಸ್ಪೀಡ್ ಮ್ಯಾನುವಲ್ ಬದಲಾವಣೆಯ ಗೇರ್ ಬಾಕ್ಸ್ ಹೊಂದಿರಲಿದೆ. ಈ ವಾಹನದ ಬೆಲೆ 11 ಲಕ್ಷ ರೂ.ಗಳಷ್ಟಿರಲಿದೆ ಎಂದು ಅಂದಾಜಿಸಲಾಗಿದೆ.
ಟಾಟಾ ಆಲ್ಟ್ರೋಜ಼್ ಇವಿ
ಟಾಟಾ ಮೋಟರ್ಸ್‌ನ ಮುಂಬರುವ ಎಲೆಕ್ಟ್ರಿಕ್ ಕಾರ್ ಆಗಿರುವ ಆಲ್ಟ್ರೋಜ಼್ ಇವಿಯನ್ನು 2020 ಆಟೋ ಎಕ್ಸ್ಪೋನಲ್ಲಿ ಪ್ರದರ್ಶಿಸಲಾಗಿದೆ. ಇವಿ ಹ್ಯಾಚ್‌ಬ್ಯಾಕ್ ಕಾರಿನ ಮಾದರಿ ಮಾಡೆಲ್ ಅನ್ನು ತೋರಿಸಲಾಗುತ್ತಿದ್ದು, ಈ ಕಾರು 14 ಲಕ್ಷ ರೂಪಾಯಿಗಳಿಗೆ ಮಾರಾಟವಾಗುವ ನಿರೀಕ್ಷೆ ಇದೆ. ನೆಕ್ಸಾನ್ ಇವಿಗಿಂತ ಆಲ್ಟ್ರೋಜ಼್‌ನಲ್ಲಿ ದೊಡ್ಡದಾದ ಬ್ಯಾಟರಿ ಪ್ಯಾಕ್ ಇರುವ ನಿರೀಕ್ಷೆ ಇದ್ದು, ಒಮ್ಮೆ ಪೂರ್ಣವಾಗಿ ಚಾರ್ಜ್ ಆದಲ್ಲಿ 500 ಕಿಮೀ ವ್ಯಾಪ್ತಿಯಷ್ಟು ಸಂಚರಿಸುವ ಕ್ಷಮತೆ ಇದೆ ಎಂದು ಹೇಳಲಾಗುತ್ತಿದೆ.