ಪೆಟ್ರೋಲ್ ರೇಟ್ ದುಬಾರಿಯಾಗುತ್ತಿದ್ದಂತೆ ಸಾಮಾನ್ಯ ಜನರಲ್ಲಿ ಹೆಚ್ಚು ಮೈಲೇಜ್ ಕೊಡುವ ದ್ವಿಚಕ್ರ ವಾಹನ ವಾಹನಗಳ ಬಗ್ಗೆ ಕುತೂಹಲವೂ ಹೆಚ್ಚುತ್ತಿದೆ. ಮೈಲೇಜ್ ಬಗ್ಗೆ, ದರದ ಬಗ್ಗೆ ಮಾಹಿತಿಗಾಗಿ ತಡಕಾಡುತ್ತಾರೆ.
ಭಾರತದಲ್ಲಿನ ಐದು ಅತ್ಯಂತ ಕೈಗೆಟುಕುವ, ಹೆಚ್ಚು ಮೈಲೇಜ್ ಕೊಡುವ ಬೈಕ್‌ಗಳನ್ನು ಪಟ್ಟಿಮಾಡುವ ಪ್ರಯತ್ನ ಇಲ್ಲಿ ಮಾಡಲಾಗಿದೆ.
ಬಜಾಜ್ ಸಿಟಿ 100:
ಬಜಾಜ್ ಸಿಟಿ 100 ಬೈಕ್ ಪ್ರತಿ ಲೀಟರ್‌ಗೆ 75 ಕಿಮೀ ಮೈಲೇಜ್‌ನೊಂದಿಗೆ ಭಾರತದಲ್ಲಿ ಹೆಚ್ಚು ಇಂಧನ ಸಮರ್ಥ್ಯಗಳ ಬೈಕ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಬೈಕ್ ಸಿಂಗಲ್ ಸಿಲಿಂಡರ್, ಫೋರ್ ಸ್ಟ್ರೋಕ್ ಏರ್ ಕೂಲ್ಡ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದರ ಬೆಲೆ 51,800 ರೂ.ನಿಂದ ಪ್ರಾರಂಭವಾಗುತ್ತದೆ. ಬೈಕ್‌ನಲ್ಲಿರುವ ಇಂಧನ ಟ್ಯಾಂಕ್ 10.5 ಲೀಟರ್ ಸಾಮರ್ಥ್ಯ ಹೊಂದಿದೆ.
ಟಿವಿಎಸ್ ಸ್ಪೋರ್ಟ್:
ಟಿವಿಎಸ್ ಸ್ಪೋರ್ಟ್ 73 ಕಿಲೋ ಮೀಟರ್ ಮೈಲೇಜ್‌ನಿಂದಾಗಿ ಖರೀದಿದಾರರ ಗಮನವನ್ನು ಸೆಳೆಯುತ್ತದೆ. ಆರು ಬಣ್ಣದ ಆಯ್ಕೆ ಇದ್ದು, ಇಂಧನ ಇಂಜೆಕ್ಷನ್ ಸಿಸ್ಟಮ್ ಮತ್ತು ಏರ್ ಕೂಲ್ಡ್ ಸ್ಪಾರ್ಕ್ ಇಗ್ನಿಷನ್ ಸಿಸ್ಟಮ್ ನೊಂದಿಗೆ ಸಿಂಗಲ್ ಸಿಲಿಂಡರ್ ನಾಲ್ಕು ಸ್ಟ್ರೋಕ್ ಅನ್ನು ಹೊಂದಿದೆ. ಬೈಕ್‌ನಲ್ಲಿರುವ ಟ್ಯಾಂಕ್ 10 ಲೀಟರ್ ಇಂಧನ ತುಂಬಿಸುವ ಸಾಮರ್ಥ್ಯ ಹೊಂದಿದೆ. 58,900 ರೂ.ನಿಂದ ಬೆಲೆಯ ಆರಂಭವಾಗುತ್ತದೆ.
ಅಕ್ರಮವಾಗಿ ಪಿಂಚಣಿ ಪಡೆಯುತ್ತಿದ್ದ ಅನರ್ಹರಿಗೆ ಬಿಗ್ ಶಾಕ್
ಬಜಾಜ್ ಸಿಟಿ 110:
ಬಜಾಜ್ ಸಿಟಿ 110 ಮೈಲೇಜ್ 70 ಕಿಲೋ ಮೀಟರ್ ಪ್ರತಿ ಲೀಟರ್‌ಗೆ ನೀಡಲಿದೆ. ಇದರ ಬೆಲೆ 58,200 ರೂ. ಇದ್ದು, 10.5 ಲೀಟರ್ ಇಂಧನ ಸಾಮರ್ಥ್ಯದೊಂದಿಗೆ ಸಿಂಗಲ್ ಸಿಲಿಂಡರ್, ನಾಲ್ಕು-ಸ್ಟ್ರೋಕ್, ಏರ್ ಕೂಲ್ಡ್ ಎಂಜಿನ್ ಹೊಂದಿದೆ.
ಬಜಾಜ್ ಪ್ಲಾಟಿನಾ 110:
ಬಜಾಜ್ ಪ್ಲಾಟಿನಾ 110 ಎಪ್ಪತ್ತು ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಈ ಬೈಕ್ ಸಿಂಗಲ್ ಸಿಲಿಂಡರ್, ಫೋರ್ ಸ್ಟ್ರೋಕ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದರ ಬೆಲೆ 63,300 ರೂ.ನಿಂದ ಪ್ರಾರಂಭವಾಗುತ್ತವೆ. ಇಂಧನ ಟ್ಯಾಂಕ್ ಸಾಮರ್ಥ್ಯ 11 ಲೀಟರ್.
ಟಿವಿಎಸ್ ಸ್ಟಾರ್ ಸಿಟಿ ಪ್ಲಸ್:
ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಬೈಕ್ 70 ಕಿಮೀ ಮೈಲೇಜ್ ಹೊಂದಿರುವ ಉತ್ತಮ ಇಂಧನ ಸಮರ್ಥ್ಯದ ಬೈಕ್ ಎನಿಸಿಕೊಂಡಿದೆ. ಇದರ ಬೆಲೆ ರೂ. 70,000 ನಿಂದ ಆರಂಭವಾಗಲಿದೆ. ಫೋರ್-ಸ್ಟ್ರೋಕ್ ಎಂಜಿನ್, ಟ್ಯಾಂಕ್‌ನಲ್ಲಿ ಗರಿಷ್ಠ 10 ಲೀಟರ್ ಇಂಧನ ಭರ್ತಿಗೆ ಅವಕಾಶ ಹೊಂದಿದೆ.