ಕಳೆದ ವರ್ಷ ಭಾರತದಲ್ಲಿ ಬಿಡುಗಡೆಯಾದ ಹೋಂಡಾ ಸಿಬಿ350 ಆರ್‌ಎಸ್ ವಾಸ್ತವದಲ್ಲಿ ಹೈನೆಸ್ ಸಿಬಿ350ಯ ಮುಂದುವರೆದ ಭಾಗವಾಗಿದೆ.
ಮುಂಬದಿ ಫೋರ್ಕ್‌ಗಳ ಮೇಲೆ ಬೆಲ್ಲೋಗಳು, ಟಕ್ ಮತ್ತು ರೋಲ್ ಸ್ಯಾಡಲ್, ಇಂಧನ ಟ್ಯಾಂಕ್ ಮೇಲೆ ಪಟ್ಟಿಗಳು, ಎಲ್‌ಇಡಿ ದೀಪಗಳು, ಸ್ಕಿಡ್ ಪ್ಲೇಟ್ ಮತ್ತು ಬ್ಲಾಕ್ ಪ್ಯಾಟರ್ನ್ ಟೈರ್‌ಗಳು ಈ ಬೈಕಿನ ವೈಶಿಷ್ಟ್ಯ. 348.36ಸಿಸಿ ಏರ್-ಕೂಲ್ಡ್ ಇಂಜಿನ್ ಜೊತೆಗೆ ಬರುವ ಈ ಬೈಕ್ 21 ಬಿಎಚ್‌ಪಿ ಮತ್ತು 30 ಎನ್‌ಎಂ ಟಾರ್ಕ್ ಉತ್ಪಾದಿಸುವ ಕ್ಷಮತೆ ಹೊಂದಿದೆ.
ರಾಜ್ಯದೆಲ್ಲೆಡೆ ವಾಹನ ತಪಾಸಣೆ ಕೇಂದ್ರ, ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥ; ಸಚಿವ ಬಿ. ಶ್ರೀರಾಮುಲು
ಅಸಿಸ್ಟ್ ಮತ್ತು ಸ್ಲಿಪ್ಪರ್ ಕ್ಲಚ್‌ನೊಂದಿಗೆ ಈ ಬೈಕ್ 5-ಸ್ಪೀಡ್ ಗಿಯರ್ ಬಾಕ್ಸ್‌ನೊಂದಿಗೆ ಬರುತ್ತದೆ. ಹೋಂಡಾ ಸಿಬಿ350 ಆರ್‌ಎಸ್‌ನಲ್ಲಿ ಸೆಮಿ ಡಿಜಿಟಲ್ ಇನ್ಸ್‌ಟ್ರುಮೆಂಟ್ ಪ್ಯಾನೆಲ್ ಮತ್ತು ಹೋಂಡಾದದ ಸೆಲೆಕ್ಟಬಲ್ ಟಾರ್ಕ್ ಕಂಟ್ರೋಲ್ಲ (ಎಚ್‌ಎಸ್‌ಟಿಸಿ) ವ್ಯವಸ್ಥೆ ಸಹ ಇದ್ದು ಹಿಂಬದಿ ಚಕ್ರದ ಮೇಲೆ ಇನ್ನಷ್ಟು ನಿಯಂತ್ರಣ ಸಾಧಿಸಲು ನೆರವಾಗುತ್ತದೆ.
2. ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350
ಹೊಸ ತಲೆಮಾರಿನ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಭಾರತದಲ್ಲಿ ಲಾಂಚ್ ಆಗಿರುವ ಮುಖ್ಯವಾದ ಕ್ಲಾಸಿಕ್ ಬೈಕ್‌ಗಳಲ್ಲಿ ಒಂದು. ಹಳೆಯ ಶೈಲಿಯ ವಿನ್ಯಾಸವನ್ನೇ ಕಾಯ್ದುಕೊಂಡಿರುವ ಈ ಬೈಕ್, 349ಸಿಸಿ, ಏರ್-ಕೂಲ್ಡ್ ಇಂಜಿನ್ ಹೊಂದಿದ್ದು 20ಬಿಎಚ್‌ಪಿ ಮತ್ತು 27 ಎನ್‌ಎಂನಷ್ಟು ಗರಿಷ್ಠ ಟಾರ್ಕ್ ಉತ್ಪಾದಿಸಬಲ್ಲದಾಗಿದೆ. ಹಳೆಯ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350ಗಿಂತ ಹೊಸ ಮಾಡೆಲ್‌ನಲ್ಲಿ ಇನ್ನಷ್ಟು ಉತ್ತಮವಾದ ಸಸ್ಪೆನ್ಶನ್ ಮತ್ತು ಬ್ರೇಕಿಂಗ್ ಹಾರ್ಡ್‌ವೇರ್ ಇದ್ದು, ಟ್ರಿಪ್ಪರ್ ದಿಕ್ಸೂಚಿ ವ್ಯವಸ್ಥೆ ಹೊಂದಿದೆ.
3. ಜಾವಾ 42
ಬಹುಲೋಹೀಯ ಚಕ್ರಗಳು, ಬಾರ್-ಎಂಡ್ ಮೌಂಟೆಡ್ ಕನ್ನಡಿಗಳು ಮತ್ತು ಇಂಧನ ಟ್ಯಾಂಕ್ ಮೇಲೆ ಪಟ್ಟಿಗಳ ಆಕರ್ಷಕ ಲುಕ್ ಹೊಂದಿರುವ ಜಾವಾ 42 ಜಾವಾ ಕ್ಲಾಸಿಕ್‌ನ ಒಂದಷ್ಟು ಅಂಶಗಳನ್ನು ಹೊಂದಿದೆ. 293 ಸಿಸಿ ಇಂಜಿನ್ ಮೂಲಕ 27 ಬಿಎಚ್‌ಪಿ ಮತ್ತು 27 ಎನ್‌ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲ ಸಾಮರ್ಥ್ಯ ಇರುವ ಜಾವಾ 42 ಡಿಜಿಟಲ್ ಇನ್ಸ್‌ಟ್ರುಮೆಂಟ್ ಕ್ಲಸ್ಟರ್ ಹೊಂದಿದೆ.
4. ಕಾವಾಸಾಕಿ ಜ಼ಡ್650ಆರ್‌ಎಸ್
ಕಾವಾಸಾಕಿ ಜ಼ಡ್650ಯ ರೆಟ್ರೋ ವರ್ಶನ್ ಆಗಿರುವ ಕಾವಾಸಾಕಿ ಜ಼ಡ್650ಆರ್‌ಎಸ್ ಭಾರತದಲ್ಲಿ ಕಳೆದ ತಿಂಗಳು ಲಾಂಚ್ ಆಗಿದೆ. 649ಸಿಸಿ ಪ್ಯಾರಲಲ್-ಅವಳಿ ಇಂಜಿನ್‌ನೊಂದಿಗೆ ಬರುವ ಈ ಬೈಕ್‌ನಲ್ಲಿ ಆರು-ಸ್ಪೀಡ್ ಗಿಯರ್ ಬಾಕ್ಸ್ ಇವೆ. 8,000ಆರ್‌ಪಿಎಂನಲ್ಲಿ 67ಬಿಎಚ್‌ಪಿ ಮತ್ತು 64 ಎನ್‌ಎಂ ಗರಿಷ್ಠ ಟಾರ್ಕ್‌ಅನ್ನು 6,700ಆರ್‌ಪಿಎಂನಲ್ಲಿ ಉತ್ಪಾದಿಸುವ ಶಕ್ತಿಯನ್ನು ಕಾವಾಸಾಕಿ ಜ಼ಡ್650ಆರ್‌ಎಸ್ ಹೊಂದಿದೆ. ಸೆಮಿ ಡಿಜಿಟಲ್ ಇನ್ಸ್‌ಟ್ರುಮೆಂಟ್ ಕ್ಲಸ್ಟರ್‌ನಲ್ಲಿ ಸ್ಪೀಡೋಈಟರ್ ಮತ್ತು ತ್ಯಾಚೋಮೀಟರ್‌ಗಳು ಅನಲಾಗ್ ಆಗಿದ್ದರೆ, ಎಲ್‌ಸಿಟಿ ಡಿಸ್ಲ್ಪೇ ಮೂಲಕ ಗಿಯರ್ ಸ್ಥಾನಮಾನ, ಇಂಧನದ ಮಟ್ಟ, ಟ್ರಿಪ್ ಮೀಟರ್‌ಗಳನ್ನು ತೋರುತ್ತದೆ.
5. ಬಿಎಂಡಬ್ಲ್ಯೂ ಆರ್18 ಕ್ಲಾಸಿಕ್
ಟೂರರ್ ಮೋಟರ್‌ಸೈಕಲ್ ಆಗಿರುವ ಬಿಎಂಡಬ್ಲ್ಯೂ ಆರ್18 ಕ್ಲಾಸಿಕ್ಅನ್ನು ಬಿಎಂಡಬ್ಲ್ಯೂ ಆರ್18ನ ಮೊದಲ ಅವತರಣಿಕೆಯ ಮೇಲೆ ಅಭಿವೃದ್ಧಿ ಪಡಿಸಲಾಗಿದ್ದು, ಭಾರತದಲ್ಲಿ ಕಳೆದ ವರ್ಷ ಲಾಂಚ್ ಮಾಡಲಾಗಿದೆ. 1,802ಸಿಸಿ ಬಾಕ್ಸರ್ ಇಂಜಿನ್ ಹೊಂದಿರುವ ಬಿಎಂಡಬ್ಲ್ಯೂ ಆರ್18 ಕ್ಲಾಸಿಕ್ ಇದರ ಮೂಲಕ 90 ಬಿಎಚ್‌ಪಿ ಮತಮ್ತು 158 ಎನ್‌ಎಂನಷ್ಟು ಗರಿಷ್ಠ ಟಾರ್ಕ್ ಉತ್ಪಾದಿಸಬಲ್ಲದಾಗಿದೆ.
ಟೇಲ್ ವಿಂಡ್‌ಸ್ಕ್ರೀನ್, ಸ್ಯಾಡಲ್ ಬ್ಯಾಗ್‌ಗಳು, ಇಂಧನ ಟ್ಯಾಂಕ್ ಮೇಲೆ ಕೈಗಳಿಂದ ಪೇಂಟ್ ಮಾಡಲ್ಪಟ್ಟ ಪಿನ್‌ಸ್ಟ್ರೈಪ್‌ಗಳು, ಹಿಂಬದಿ ನೋಟಕ್ಕಾಗಿ ಕ್ರೋಮ್, ಬ್ರೇಕ್ ಕ್ಯಾಲಿಪರ್‌ಗಳು, ಕ್ಲಚ್ ಲೀವರ್, ಬ್ರೇಕ್ ಲೀವರ್ ಮತ್ತು ಕ್ರಾಂಕ್ ಕೇಸ್‌ಗಳನ್ನು ಹೊಂದಿರುವ ಬಿಎಂಡಬ್ಲ್ಯೂ ಆರ್18 ಕ್ಲಾಸಿಕ್ ರಿವರ್ಸ್ ಅಸಿಸ್ಟ್, ಎಲೆಕ್ಟ್ರಾನಿಕ್ ಸ್ಥಿರತೆ ನಿಯಂತ್ರಣ, ಮೂರು ರೈಡಿಂಗ್ ಮೋಡ್‌ಗಳು ಮತ್ತು ಹಿಲ್ ಸ್ಟಾರ್ಟ್ ಕಂಟ್ರೋಲ್‌ಗಳಂಥ ಆಧುನಿಕ ವ್ಯವಸ್ಥೆಗಳನ್ನು ಸಹ ಒಳಗೊಂಡಿದೆ.
ಮೇಲ್ಕಂಡ ಬೈಕುಗಳೊಂದಿಗೆ ಬ್ರಿಟನ್‌ನ ಟ್ರಯಂಫ್ ಬೊನ್ನೆವಿಲ್ಲೆ ಸಹ ಭಾರತದ ಮಾರುಕಟ್ಟೆಯಲ್ಲಿ ತನ್ನ ಪ್ರೀಮಿಯಂ ಕ್ಲಾಸಿಕ್ ಬೈಕ್‌ಗಳನ್ನು ಬಿಡುಗಡೆ ಮಾಡಿದೆ.