ಇಂದು ಭಾರತದಲ್ಲಿ ಎಸ್ ಯುವಿ ಗಳದ್ದೇ ಅಬ್ಬರ. ಕಾರು ಮಾರುಕಟ್ಟೆಯು ಎಸ್‌ಯುವಿಗಳಿಂದಲೇ ತುಂಬಿದೆ. ಅದರಲ್ಲೂ ಕೈಗೆಟಕುವ ದರದ ಆಟೋಮ್ಯಾಟಿಕ್ ಎಸ್‌ಯುವಿಗಳ ಬಗ್ಗೆ ಜನರಲ್ಲಿ ಒಂದು ಕುತೂಹಲವಿದೆ. ಆ ಬಗ್ಗೆ ತಿಳಿಸಿಕೊಡುವ ಪ್ರಯತ್ನ ಇಲ್ಲಿ ಮಾಡಲಾಗಿದೆ. ಸಮಾನ್ಯರು ಖರೀದಿಸಬಹುದಾದ ಟಾಪ್ ಫೋರ್ ಎಸ್ ಯುವಿಗಳು ಯಾವ್ದು ಅಂತ ನೋಡೋಣ ಬನ್ನಿ.
ಟಾಟಾ ನೆಕ್ಸನ್:
ಟಾಟಾ ನೆಕ್ಸಾನ್ ಭಾರತೀಯ ವಾಹನ ತಯಾರಕರಿಂದ ಕಾಂಪ್ಯಾಕ್ಟ್ ಎಸ್ ಯುವಿ ಆಗಿದ್ದು, ನೆಕ್ಸ್ ಎಎಮ್ ಟಿ ಶ್ರೇಣಿಯು ರೂ. 10.70 ಲಕ್ಷದಿಂದ (ಆನ್-ರೋಡ್) ಪ್ರಾರಂಭವಾಗುತ್ತದೆ. ಇದು ಭಾರತದಲ್ಲಿ ಹೆಚ್ಚು ಮಾರಾಟವಾಗುವ ಎಸ್ ಯುವಿ ಗಳಲ್ಲಿ ಒಂದಾಗಿದೆ. ಪೆಟ್ರೋಲ್, ಡೀಸೆಲ್ ವರ್ಗದಲ್ಲೂ ಲಭ್ಯ.
ಮಹೀಂದ್ರಾ ಎಕ್ಸ್‌ಯುವಿ-700 ಕಾರು ಬುಕ್ ಮಾಡಿದ್ದೀರಾ….? ಹಾಗಾದ್ರೆ ನಿಮಗೆ ಈ ಫೀಚರ್ಸ್ ಸಿಗಲ್ಲ
ನಿಸ್ಸಾನ್ ಮ್ಯಾಗ್ನೈಟ್:
ನಿಸ್ಸಾನ್ ಮ್ಯಾಗ್ನೈಟ್ ಎಕನಾಮಿಕಲ್ ಎಸ್ ಯುವಿ ಎನಿಸಿಕೊಂಡಿದೆ. 1.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಪವರ್ ಸೋರ್ಸ್ ಮೂಲವಾಗಿ ಬಳಸಲಾಗುತ್ತದೆ. ಐದು ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್ ಮಿಷನ್ ಹೊಂದಿದೆ. ನಿಸ್ಸಾನ್ ಮ್ಯಾಗ್ನೈಟ್ ಆಟೋಮ್ಯಾಟಿಕ್ ಬೆಲೆ ರೂ 9.98 ಲಕ್ಷದಿಂದ (ಆನ್ ರೋಡ್) ಆರಂಭವಾಗುತ್ತದೆ.
ರೆನಾಲ್ಟ್ ಕಿಗರ್:
ಮಾರುಕಟ್ಟೆಯಲ್ಲಿ ಅತ್ಯಂತ ಕಡಿಮೆ ವೆಚ್ಚದ ಕಾಂಪ್ಯಾಕ್ಟ್ ಎಸ್ ಯುವಿಗಳಲ್ಲಿ ಒಂದಾಗಿದೆ. ಪ್ಲಾಟ್‌ಫಾರ್ಮ್, ಎಂಜಿನ್ ಮತ್ತು ಕಿಗರ್‌ನ ಹಲವು ಗುಣಲಕ್ಷಣಗಳು ನಿಸ್ಸಾನ್ ಮ್ಯಾಗ್ನೈಟ್‌ನಂತಿದೆ. ಅತ್ಯಂತ ಕಡಿಮೆ ಬೆಲೆಯ ಕಿಗರ್ ಆಟೋಮ್ಯಾಟಿಕ್‌ನ ಬೆಲೆ ರೂ 8.47 ಲಕ್ಷಗಳು (ಆನ್-ರೋಡ್).
ಟಾಟಾ ಪಂಚ್:
ಟಾಟಾ ಪಂಚ್ ಭಾರತೀಯ ಮಾರುಕಟ್ಟೆಯಲ್ಲಿ ಮೈಕ್ರೋ ಎಸ್‌ಯುವಿ ಎಂದು ಪರಿಗಣಿಸಲಾಗಿದೆ. ಪಂಚ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ರೂ.8.44 ಲಕ್ಷ (ಆನ್-ರೋಡ್) ಬೆಲೆಯಲ್ಲಿ ಲಭ್ಯ. 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಸಂಯೋಜಿಸಲಾದ 1.2-ಲೀಟರ್ ರೆವೊಟ್ರಾನ್ ಪೆಟ್ರೋಲ್ ಎಂಜಿನ್‌ನಿಂದ ಅದರ ಪವರ್ ಪಡೆಯುತ್ತದೆ.