ಗೂಗಲ್ ಯಾರಿಗೆ ಗೊತ್ತಿಲ್ಲ ಹೇಳಿ. ಹೊಸ ತಲೆಮಾರಿನ ಮಕ್ಕಳು ಸಹ ಬಳಕೆ ಮಾಡುವ ಸರ್ಚ್ ಎಂಜಿನ್.
ಇದು ಹಲವಾರು ಅದ್ಭುತ ಒಳಗೊಂಡಿದೆ, ಅವುಗಳಲ್ಲಿ ಹಲವು ನಮಗೆ ತಿಳಿದಿರುತ್ತವೆ ಮತ್ತು ನಮ್ಮ ಗ್ರಹಿಕೆ ಮತ್ತು ಕಲ್ಪನೆಗೆ ಮೀರಿದ ಕೆಲವು ಇವೆ.
ಗೂಗಲ್ ಕವರ್ ಪೇಜ್ನಲ್ಲಿಯೇ ಇರುವ 10 ಕ್ರೇಜಿಯೆಸ್ಟ್, ತಮಾಷೆ, ನವೀನ ಮತ್ತು ಬುದ್ಧಿವಂತ ರಹಸ್ಯ ತಂತ್ರಗಳನ್ನು ಇಡುವ ಪ್ರಯತ್ನ ಮಾಡಲಾಗಿದೆ.
ಇಂಟರ್ನೆಟ್ ಸಂಪರ್ಕವಿಲ್ಲದಿದ್ದರೆ, ಅಥವ ಕಡಿತವಾದ ಸಂದರ್ಭದಲ್ಲಿ, ನೆಟ್ವರ್ಕ್ ಇಲ್ಲದ ಕಡೆಗಳಲ್ಲಿ ಬಳಕೆದಾರರಿಗೆ ಸಮಯ ಕಳೆಯುವುದಕ್ಕಾಗಿ “ಆಫ್ಲೈನ್ ಡೈನೋಸಾರ್ ಗೇಮ್” ಇರಿಸಲಾಗಿದೆ. ನೆಟ್ ಸಂಪರ್ಕವು ಕಳೆದುಹೋದಾಗಲೆಲ್ಲಾ ಅದು ಕಾಣಿಸಿಕೊಳ್ಳುತ್ತದೆ.
ಆಸ್ಕ್ಯೂ:
ಸರ್ಚ್ ಬಾರ್ನಲ್ಲಿ “Askew” ಎಂದು ಟೈಪ್ ಮಾಡಿ, ಎಂಟರ್ ಒತ್ತಿರಿ, ಆಗ ಒಂದು ಬದಿಗೆ ಸ್ಕ್ರೀನ್ ಒರಗಿಬಿಡುತ್ತದೆ. ಸಾಮಾನ್ಯವಾಗಿ ಕಾಣಿಸುವುದಕ್ಕಿಂತ ವಿಭಿನ್ನವಾಗಿ ಕಾಣಿಸಲಿದೆ.
ಗೂಗಲ್ ಆರ್ಬಿಟ್:
“ಗೂಗಲ್ ಆರ್ಬಿಟ್” ಎಂದು ಟೈಪ್ ಮಾಡಿ ಸರ್ಚ್ ಮಾಡಲು ಕ್ಲಿಕ್ ಮಾಡಿದರೆ “Google Sphere – Mr.doob” ಎಂದು ಬರಲಿದೆ. ಅದರ ಮೇಲೆ ಕ್ಲಿಕ್ ಮಾಡಿದ ಕೂಡಲೇ ಸ್ಕ್ರೀನ್ ಭೂಮಿ ಸುತ್ತಿದಂತೆ ಸುತ್ತಾಟ ಆರಂಭಿಸುತ್ತದೆ. ನೃತ್ಯ ಮಾಡಿದಂತೆಯೂ ಕಾಣಿಸುತ್ತದೆ.
ಬೆಳಿಗ್ಗೆ ಈ ಕೆಲಸ ಮಾಡಿದ್ರೆ ಮನೆ ಮೇಲೆ ಬೀಳಲ್ಲ ‘ಕೆಟ್ಟ ದೃಷ್ಟಿ’
ನಾಣ್ಯವನ್ನು ಫ್ಲಿಪ್ ಮಾಡಿ:
ಸಾಮಾನ್ಯವಾಗಿ ಕೆಲವು ಆಟಗಳಲ್ಲಿ ನಾಣ್ಯ ಫ್ಲಿಪ್ ಮೂಲಕ ಆಯ್ಕೆ ಮಾಡುವುದುಂಟು. ಕಾಯಿನ್ ಇಲ್ಲವೆಂದರೆ ಚಿಂತೆ ಬೇಡ, ಗೂಗಲ್ ನ ಸಹಾಯ ಮಾಡುತ್ತದೆ. “ಫ್ಲಿಪ್ ಎ ಕಾಯಿನ್” ಎಂದು ಟೈಪ್ ಮಾಡಿ ಮತ್ತು ಎಂಟರ್ ಒತ್ತಿರಿ. ಹೆಡ್ ಎಂಡ್ ಟೈಲ್ ಮಾಡಲು ಇದು ಅತೀ ಸಲೀಸು.
ರೋಲ್ ಎ ಡೈಸ್
ಬೋರ್ಡ್ ಆಟವನ್ನು ಆಡುವಾಗ ದಾಳ ಉರುಳಿಸಲಾಗುತ್ತೆ. ದಾಳವನ್ನು ಹೊಂದಿಲ್ಲ ಅಥವಾ ಅದನ್ನು ಕಳೆದುಕೊಂಡಿದ್ದೀರಿ ಎಂದು ಭಾವಿಸಿದರೆ, ಗೂಗಲ್ ದಾಳವನ್ನು ಉರುಳಿಸಲು ಆಯ್ಕೆಯನ್ನು ನೀಡುತ್ತದೆ. “ರೋಲ್ ಎ ಡೈಸ್” ಎಂದು ಟೈಪ್ ಮಾಡಿ ವರ್ಚುವಲ್ ಡೈಸ್ ಪಡೆಯಬಹುದು. ಡೈಸ್ ಗಳು ವಿವಿಧ ಬಣ್ಣ ಮತ್ತು ಆಕಾರಗಳಲ್ಲಿ ಬರುತ್ತವೆ.
ಜೆರ್ಗ್ ರಶ್:
“Zerg Rush” ಎಂದು ಟೈಪ್ ಮಾಡಿ ಮತ್ತು ಎಂಟರ್ ಒತ್ತಿದರೆ ಮೊದಲ ಹುಡುಕಾಟ ಫಲಿತಾಂಶವಾಗಿ “ಪ್ಲೇ “ಜೆರ್ಗ್ ರಶ್” Google – elgooG ಬಟನ್ ಬರಲಿದೆ. ಅದನ್ನು ಕ್ಲಿಕ್ಕಿಸಿದರೆ ಸೊನ್ನೆಗಳು ಇಳಿಯಲಾರಂಭಿಸುತ್ತವೆ ಮತ್ತು ಸ್ಕ್ರೀನ್ ಮೇಲಿದ್ದುದನ್ನು ಅಳಿಸಿ ಹಾಕುತ್ತದೆ.
ಅಟಾರಿ ಬ್ರೇಕ್ಔಟ್:
80ರ ದಶಕದಲ್ಲಿ ಅಟಾರಿ ಆಟವು ಬಹಳ ಫೇಮಸ್. “ಅಟಾರಿ ಬ್ರೇಕ್ಔಟ್” ಎಂದು ಟೈಪ್ ಮಾಡಿ, ಎಂಟರ್ ಒತ್ತಿರಿ ಮತ್ತು “ಗೂಗಲ್ ಅಟಾರಿ ಬ್ರೇಕ್ಔಟ್ ಗೇಮ್” ಲಿಂಕ್ ಸಿಗಲಿದೆ. ಲಿಂಕ್ ಕ್ಲಿಕ್ ಮಾಡಿದ ಕೂಡಲೇ ಆಟ ರೆಡಿ, ಟೈಂಪಾಸ್ ಸಲೀಸು.
ಗೂಗಲ್ ಪ್ಯಾಕ್ಮ್ಯಾನ್:
“Google Pacman” ಎಂದು ಟೈಪ್ ಮಾಡಿ ಮತ್ತು ಎಂಟರ್ ಒತ್ತಿದಾಗ PAC-MAN ಡೂಡಲ್ ಬರಲಿದೆ. ನೇರ ಆಟಕ್ಕಿಳಿಯಬಹುದು.
ಗೂಗಲ್ ಗ್ರಾವಿಟಿ:
“ಗೂಗಲ್ ಗ್ರಾವಿಟಿ” ಎಂದು ಟೈಪ್ ಮಾಡಿ ಮತ್ತು ಎಂಟರ್ ಒತ್ತಿದರೆ “Google Gravity – Mr.doob” ಲಿಂಕ್ ಬರಲಿದೆ, ಅದನ್ನು ಕ್ಲಿಕ್ ಮಾಡುತ್ತಿದ್ದಂತೆ ಕವರ್ ಪೇಜ್ ಕುಸಿದು ಬೀಳುತ್ತದೆ. ತುಂಡು ತುಂಡನ್ನು ಸುತ್ತಲೂ ಎಸೆಯಬಹುದು.
ಬ್ಯಾರೆಲ್ ರೋಲ್:
“ಡು ಎ ಬ್ಯಾರೆಲ್ ರೋಲ್” ಎಂದು ಟೈಪ್ ಮಾಡಿ ಎಂಟರ್ ಒತ್ತಿದರೆ ಸ್ಕ್ರೀನ್ 360 ಡಿಗ್ರಿ ತಿರುಗುತ್ತದೆ. ಒಂದು ಸುತ್ತಿನಲ್ಲಿ ತೃಪ್ತರಾಗದಿದ್ದರೆ, ಅದನ್ನು 10 ಅಥವಾ 20 ಬಾರಿ ತಿರುವಂತೆ ಮಾಡಬಹುದು.