ಟೂತ್ ಪೇಸ್ಟ್ ಕೂಡಾ ಮುಖದ ಕಲೆ, ಮೊಡವೆಗಳನ್ನು ಹೋಗಲಾಡಿಸಬಲ್ಲವು. ಅದು ಹೇಗೆಂದು ತಿಳಿಯಬೇಕೇ…?
ಒಂದು ಚಮಚ ನಿಂಬೆ ರಸಕ್ಕೆ ಪೇಸ್ಟ್ ಸೇರಿಸಿ ಮುಖದ ಮೇಲೆ ಮೃದುವಾಗಿ ಲೇಪಿಸಿ. ಒಂದು ಗಂಟೆ ಬಿಟ್ಟು ತೊಳೆಯಿರಿ. ವಾರಕ್ಕೆರಡು ಬಾರಿ ಹೀಗೆ ಮಾಡುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ.
ಮೊಡವೆ ಮೂಡಿರುವ ಜಾಗಕ್ಕೆ ಸ್ವಲ್ಪ ಕೊಲ್ಗೇಟ್ ಹಚ್ಚಿ ಒಂದು ಗಂಟೆಯ ನಂತರ ತೊಳೆದರೆ ಮೊಡವೆ ದೊಡ್ಡದಾಗದೆ ಅಲ್ಲೇ ಮುದುಡುತ್ತದೆ. ರಾತ್ರಿ ಹಚ್ಚಿದರೆ ಬೆಳಗಾಗುವಾಗ ನಿಮ್ಮ ಮೊಡವೆ ಮಾಯವಾಗಿರುತ್ತದೆ.
ಟೊಮೆಟೊ ಪ್ಯೂರಿಯೊಂದಿಗೆ ತುಸು ಪೇಸ್ಟ್ ಬೆರೆಸಿ ಮುಖಕ್ಕೆ ಹಚ್ಚಿ. ಅರ್ಧ ಗಂಟೆ ಬಿಟ್ಟು ತಣ್ಣೀರಿನಿಂದ ತೊಳೆದರೆ ಚರ್ಮ ಬಿಳುಪಾಗುತ್ತದೆ ಹಾಗು ಸನ್ ಬರ್ನ್ ಕಡಿಮೆಯಾಗುತ್ತದೆ.
ಪೇಸ್ಟ್ಗೆ ಒಂದು ಚಮಚ ಗುಲಾಬಿ ನೀರು, ಉಪ್ಪು ಬೆರೆಸಿ ಸ್ಕ್ರಬ್ ರೀತಿಯಲ್ಲಿ ಹಚ್ಚಿಕೊಳ್ಳುವುದರಿಂದ ಮುಖದ ಮೇಲಿರುವ ಕಪ್ಪು ರಂಧ್ರಗಳು ಮಾಯವಾಗುತ್ತವೆ. ಆದರೆ ಸೂಕ್ಷ್ಮ ತ್ವಚೆಯವರು ಇದನ್ನು ಬಳಸದೇ ಇರುವುದು ಉತ್ತಮ. ಮೊದಲಿಗೆ ನಿಮ್ಮ ಕೈ ಮೇಲೆ ತುಸು ಹಚ್ಚಿ ಪರೀಕ್ಷಿಸಿದ ಬಳಿಕ ಮುಖಕ್ಕೆ ಹಚ್ಚಿ.