ಹಾಸ್ಯದ ಮೂಲಕ ದೆಹಲಿ ಪೊಲೀಸರು ಸಂಚಾರಿ ನಿಯಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ವಿಡಿಯೋವೊಂದನ್ನ ಹಂಚಿಕೊಂಡಿದ್ದಾರೆ. ಇಲಾಖೆಯ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ವ್ಯಕ್ತಿಯೊಬ್ಬ ಸೈಕಲ್ ಸವಾರಿ ಮಾಡುತ್ತಾ ಸ್ಟಂಟ್ ಮಾಡಲು ಪ್ರಯತ್ನಿಸುವ ವಿಡಿಯೋವೊಂದನ್ನ ಹಂಚಿಕೊಂಡಿದ್ದು, ರಸ್ತೆಯಲ್ಲಿ ಸುರಕ್ಷತೆಗೆ ಆದ್ಯತೆ ನೀಡುವಂತೆ ತಿಳಿಸಿದ್ದಾರೆ.
ವೀಡಿಯೋದಲ್ಲಿ ವ್ಯಕ್ತಿಯೊಬ್ಬ ಗಾಳಿಯಲ್ಲಿ ತನ್ನ ಕೈಗಳನ್ನು ಎತ್ತಿ ಸೈಕಲ್ನ ಹ್ಯಾಂಡಲ್ ಮೇಲೆ ತನ್ನ ಕಾಲುಗಳನ್ನಿಟ್ಟು ಸಮತೋಲನಗೊಳಿಸುವ ಮೂಲಕ ಅಪಾಯಕಾರಿ ಸಾಹಸ ಪ್ರದರ್ಶನ ಮಾಡಲು ಪ್ರಯತ್ನಿಸುತ್ತಾನೆ. ಆದರೆ ಕೆಲವೇ ನಿಮಿಷಗಳಲ್ಲಿ ನಿಯಂತ್ರಣ ತಪ್ಪಿ ಕೆಳಗೆ ಬೀಳುತ್ತಾನೆ. “ಟೂಟಾ ಟೂಟಾ ಏಕ್ ಪರಿಂದಾ ಐಸೆ ಟೂಟಾ ಕೆ ಫಿರ್ ಜುದ್ ನಾ ಪಾಯಾ” ಎಂಬ ಪ್ರಸಿದ್ಧ ಕೈಲಾಶ್ ಖೇರ್ ಹಾಡಿನ ಸಾಹಿತ್ಯವನ್ನು ವೀಡಿಯೊದಲ್ಲಿ ಬಳಸಿರುವ ಪೊಲೀಸರು ಹಾಸ್ಯಮಯವಾಗಿ ಜನರನ್ನ ಎಚ್ಚರಿಸಿದ್ದಾರೆ.
“ಸ್ಟಂಟ್ಗಳು ನಿಮ್ಮನ್ನು ಶಾಶ್ವತವಾಗಿ ದಿಗ್ಭ್ರಮೆಗೊಳಿಸಬಹುದು! ರಸ್ತೆಯಲ್ಲಿ ಸುರಕ್ಷಿತವಾಗಿರಿ.” ಎಂದು ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ. ಹಾಸ್ಯಮಯವಾಗಿ ವಿಡಿಯೋ ಮೂಲಕ ಜಾಗೃತಿ ಸಂದೇಶ ನೀಡಿರುವ ಪೊಲೀಸರ ಕಾರ್ಯವನ್ನ ನೆಟ್ಟಿಗರು ಪ್ರಶಂಶಿಸಿದ್ದು ರಸ್ತೆಯಲ್ಲಿ ಸುರಕ್ಷತೆ ನಿಯಮ ಪಾಲಿಸುವಂತೆ ಸಲಹೆಗಳನ್ನ ನೀಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.