
ಎಳನೀರಿನಲ್ಲಿ ಪ್ರೋಟೀನ್, ಕಾರ್ಬೋಹೈಡ್ರೇಟ್, ವಿವಿಧ ಬಗೆಯ ವಿಟಮಿನ್ ಮತ್ತು ಖನಿಜಾಂಶಗಳಿವೆ. ಆಂಟಿಆಕ್ಸಿಡೆಂಟ್ ಗುಣವಿರುವ ಎಳನೀರು ರೋಗಗಳನ್ನು ತಡೆಯಲು ಸಹಾಯ ಮಾಡುತ್ತದೆ. ಬೇಸಿಗೆಯಲ್ಲಿ ಬಾಯಾರಿಕೆ, ದಣಿವಾರಿಸಲು ಮಾತ್ರ ಎಳನೀರು ಬೆಸ್ಟ್ ಅಲ್ಲ. ಎಲ್ಲ ಕಾಲದಲ್ಲಿಯೂ ಎಳನೀರು ಸೇವನೆ ಮಾಡಬೇಕು.
ರಕ್ತದೊತ್ತಡ ಈಗ ಸಾಮಾನ್ಯ ಸಮಸ್ಯೆಯಾಗಿದೆ. ಇದ್ರಿಂದ ಹೃದಯಾಘಾತ, ಸ್ಟ್ರೋಕ್ ಕಾಣಿಸಿಕೊಳ್ಳುತ್ತದೆ. ತಾಜಾ ಎಳನೀರು ಸೇವನೆಯಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ. ಅದ್ರಲ್ಲಿರುವ ಪೋಟ್ಯಾಸಿಯಮ್ ಹಾಗೂ ಮೆಗ್ನೀಸಿಯಂ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
ಎಳನೀರಿನಲ್ಲಿ ಕೊಬ್ಬಿನಂಶವಿರುವುದಿಲ್ಲ. ಇದು ಹೃದಯವನ್ನು ರಕ್ಷಿಸುತ್ತದೆ. ಜೊತೆಗೆ ತೂಕ ಇಳಿಸಿಕೊಳ್ಳಲು ಇದು ಹೇಳಿ ಮಾಡಿಸಿದ ಮದ್ದು. ಜೀರ್ಣಕ್ರಿಯೆಯನ್ನು ಸುಗಮಗೊಳಿಸಿ ಚಯಾಪಚಯವನ್ನು ಆರೋಗ್ಯವಾಗಿರಿಸುತ್ತದೆ.
ಎಳನೀರಿನಲ್ಲಿ ಪ್ರೋಟೀನ್ ಹಾಗೂ ಫೈಬರ್ ಅಂಶವಿರುತ್ತದೆ. ಮಧುಮೇಹಿಗಳು ಇದನ್ನು ಕುಡಿಯಬಹುದಾಗಿದೆ. ಮಧುಮೇಹಿಗಳನ್ನು ಕಾಡುವ ಅನೇಕ ಸಮಸ್ಯೆಗಳನ್ನು ಇದು ಕಡಿಮೆ ಮಾಡುವ ಗುಣ ಹೊಂದಿದೆ.
ಎಳನೀರಿನಲ್ಲಿ ಆಂಟಿಆಕ್ಸಿಡೆಂಟ್ ಇರುತ್ತದೆ. ಇದು ದೇಹವನ್ನು ರೋಗ ಮುಕ್ತ ಮಾಡುವ ಜೊತೆಗೆ ಚರ್ಮದ ಕಾಂತಿ ಹೆಚ್ಚಲು ನೆರವಾಗುತ್ತದೆ. ಚರ್ಮದ ಮೇಲೆ ಕಾಣಿಸಿಕೊಳ್ಳುವ ಸುಕ್ಕು ಮಾಯವಾಗಿ ಚರ್ಮ ಮೃದು ಹಾಗೂ ನಯವಾಗುತ್ತದೆ.