ಲಖನೌನ ಕಲ್ಯಾಣ್ ಸಿಂಗ್ ಸೂಪರ್ ಸ್ಪೆಷಾಲಿಟಿ ಕ್ಯಾನ್ಸರ್ ಸಂಸ್ಥೆಯ ವೈದ್ಯರು ಇದೇ ಮೊದಲ ಬಾರಿಗೆ ರೋಗಿಯೊಬ್ಬರ ನಾಲಿಗೆ ಕ್ಯಾನ್ಸರ್‌ಗೆ ಶುಶ್ರೂಷೆ ನೀಡಲು ಮೈಕ್ರೋವ್ಯಾಸ್ಕುಲಾರ್ ಸರ್ಜರಿಯೊಂದನ್ನು ಮಾಡಿದ್ದಾರೆ.
ಪ್ರಾಥಮಿಕ ಹಂತದ ಟ್ಯೂಮರ್ ಸರಿಪಡಿಸಲು ಡಾ ಇಂದು ಶುಕ್ಲಾ, ಸಹ ಪ್ರಾಧ್ಯಾಪಕಿ, ಸರ್ಜರಿ ಮಾಡಿದರೆ, ಡಾ. ಮುಕ್ತಾ ವರ್ಮಾ, ಸಹ ಪ್ರಾಧ್ಯಾಪಕಿ, ಇಎನ್‌ಟಿ ಮತ್ತು ಪ್ಲಾಸ್ಟಿಕ್ ಮತ್ತು ರೀಕನ್ಸ್‌ಟ್ರಕ್ಟಿವ್ ಶಸ್ತ್ರಚಿಕಿತ್ಸೆ, ಇನ್ನಳಿದ ಶಸ್ತ್ರಚಿಕಿತ್ಸೆ ಪೂರೈಸಿದ್ದಾರೆ.
56 ವರ್ಷ ವಯಸ್ಸಿನ ರೋಗಿಯೊಬ್ಬರು ತಮ್ಮ ನಾಲಿಗೆಯ ಎಡಭಾಗದಲ್ಲಿ ವಿಪರೀತ ನೋವು ನೀಡುತ್ತಿರುವ, ಗುಣಮುಖವಾಗ ಅಲ್ಸರ್‌ಗಳೊಂದಿಗೆ ಆಸ್ಪತ್ರೆಗೆ ಆಗಮಿಸಿದ್ದರು. ತಪಾಸಣೆ ನಡೆಸಿದ ವೇಳೆ ಅವರ ನಾಲಿಗೆಯಲ್ಲಿ ಕ್ಯಾನ್ಸರ್ ಇದೆ ಎಂದು ತಿಳಿದು ಬಂದಿದೆ.
ಮಧುಮೇಹ ಹಾಗೂ ಲಿವರ್ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗೆ ಏಪ್ರಿಲ್ 27 ರಂದು ಶಸ್ತ್ರ ಚಿಕಿತ್ಸೆ ಮಾಡಿದ್ದು, ಮೈಕ್ರೋವ್ಯಾಸ್ಕುಲಾರ್ ತಂತ್ರದಿಂದ ನಾಲಿಗೆಯನ್ನು ಸರಿ ಪಡಿಸಲಾಗಿದೆ.
ರೋಗಿಯು ಸಂಪೂರ್ಣ ಗುಣಮುಖವಾಗಿದ್ದು, ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.