ಸೂರ್ಯ ಗ್ರಹಣ 29 ಮಾರ್ಚ್ 2025 ಶನಿವಾರ ಸಂಭವಿಸುತ್ತಿದೆ. ಇದು ಈ ವರ್ಷದ ಮೊದಲ ಸೂರ್ಯ ಗ್ರಹಣವಾಗಲಿದೆ. ಜ್ಯೋತಿಷೀಯ ದೃಷ್ಟಿಯಿಂದ ಈ ಸೂರ್ಯ ಗ್ರಹಣ ತುಂಬಾ ಮುಖ್ಯವಾಗಿದೆ ಏಕೆಂದರೆ ಈ ದಿನ ಶನಿ ಅಮಾವಾಸ್ಯೆ, ಶನಿ ಗೋಚರವೂ ಸಹ ಇದೆ. ಇದು ಭಾರತದಲ್ಲಿ ಗೋಚರಿಸುವುದಿಲ್ಲ. ಅಮೆರಿಕ, ಆಫ್ರಿಕಾ, ಏಷ್ಯಾದ ಕೆಲವು ಭಾಗದಲ್ಲಿ ಸೂರ್ಯಗ್ರಹಣ ಗೋಚರಿಸಲಿದೆ.
ಭಾರತೀಯ ಕಾಲಮಾನದ ಮೂಲಕ ಸೂರ್ಯ ಗ್ರಹಣ ಯಾವಾಗ ಸಂಭವಿಸುತ್ತದೆ
ಸೂರ್ಯ ಗ್ರಹಣದ ದಿನಾಂಕ – 29 ಮಾರ್ಚ್ 2025 (ಶನಿವಾರ) ಸೂರ್ಯ ಗ್ರಹಣದ ಸಮಯ – ಮಧ್ಯಾಹ್ನ 2.21 ರಿಂದ ಸಂಜೆ 6.14 .
ಸೂರ್ಯ ಗ್ರಹಣದ ಸಂದರ್ಭದಲ್ಲಿ ಏನು ಮಾಡಬೇಕು, ಏನು ಮಾಡಬಾರದು
ಸೂರ್ಯ ಗ್ರಹಣದ ವೇಳೆಯಲ್ಲಿ ಆಹಾರ ಸೇವಿಸುವುದನ್ನು ತ್ಯಜಿಸಿ.. ಗರ್ಭಿಣಿಯರು ಮನೆಯಲ್ಲಿಯೇ ಇರಬೇಕು. ಗ್ರಹಣದ ವೇಳೆಯಲ್ಲಿ ಮನಸ್ಸು ಶಾಂತವಾಗಿರಬೇಕು. ಭಗವಾನ್ ವಿಷ್ಣುವಿನ ಮಂತ್ರಗಳನ್ನು ಜಪಿಸಬಹುದು. ಗ್ರಹಣದಿಂದ ನಂತರ ಸ್ನಾನ ಮಾಡುವ ಮಹತ್ವವಿದೆ. ಜೊತೆಗೆ ದಾನವೂ ನೀಡಬಹುದು.