27 ವರ್ಷಗಳ ನಂತರ ಕೇತುಗ್ರಸ್ತ ಸೂರ್ಯಗ್ರಹಣ ಹಿನ್ನೆಲೆಯಲ್ಲಿ ನಾಳೆ ಗೋಕರ್ಣದಲ್ಲಿ ಭಕ್ತರಿಗೆ ಆತ್ಮಲಿಂಗ ಸ್ಪರ್ಶಕ್ಕೆ ನಿರ್ಬಂಧ ಹೇರಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿರುವ ಗೋಕರ್ಣದಲ್ಲಿ ಮಹಾಬಲೇಶ್ವರ ದೇವಸ್ಥಾನದ ಆತ್ಮಲಿಂಗಸ್ಪರ್ಶಕ್ಕೆ ಭಕ್ತರಿಗೆ ನಿರ್ಬಂಧ ವಿಧಿಸಲಾಗಿದೆ. ನಾಳೆ ಬೆಳಗ್ಗೆ 9:30 ರಿಂದ ಸಂಜೆ 4 ಗಂಟೆವರೆಗೆ ನಿರ್ಬಂಧ ವಿಧಿಸಲಾಗಿದೆ.
ಸೂರ್ಯಗ್ರಹಣ ಹಿನ್ನೆಲೆಯಲ್ಲಿ ನಾಳೆ ಹಾಸನಾಂಬ ದರ್ಶನಕ್ಕೆ ನಿಷೇಧಿಸಲಾಗಿದೆ. ಇಂದು ಮತ್ತು ಬುಧವಾರ ಮಾತ್ರ ಹಾಸನಾಂಬೆ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಇಂದು ಬೆಳಗ್ಗೆಯಿಂದಲೇ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸತೊಡಗಿದ್ದಾರೆ. ಗುರುವಾರ ಮದ್ಯಾನ 12 ಗಂಟೆಗೆ ಗರ್ಭಗುಡಿ ಬಾಗಿಲು ಕ್ಲೋಸ್ ಮಾಡಲಾಗುವುದು.
ಸೂರ್ಯಗ್ರಹಣ ಹಿನ್ನೆಲೆಯಲ್ಲಿ ನಾಳೆ ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನ ಬಂದ್ ಮಾಡಲಾಗುವುದು. ತಿರುಪತಿ ವೆಂಕಟೇಶ್ವರ, ಧರ್ಮಸ್ಥಳ ಮಂಜುನಾಥಸ್ವಾಮಿ, ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಬಹುತೇಕ ಎಲ್ಲಾ ದೇವಾಲಯಗಳಲ್ಲಿ ಗ್ರಹಣದ ಸಮಯ ಬಂದ್ ಮಾಡಲಾಗುವುದು. ದರ್ಶನ, ಪೂಜೆ ಇರುವುದಿಲ್ಲ. ಗ್ರಹಣ ಕಾಲ ಕಳೆದ ನಂತರ ವಿಶೇಷ ಪೂಜೆ, ಅಲಂಕಾರ, ಭಕ್ತರಿಗೆ ದರ್ಶನ ಇರಲಿದೆ ಎಂದು ಹೇಳಲಾಗಿದೆ.