
ಬಾಂಗ್ಲಾದೇಶ ಹಾಗು ನ್ಯೂಜಿಲ್ಯಾಂಡ್ ನಡುವಣ ಮೊದಲ ಏಕದಿನ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡ 44 ರನ್ ಗಳಿಂದ ಭರ್ಜರಿ ಜಯ ಸಾಧಿಸಿದ್ದು, ಎರಡನೇ ಏಕದಿನ ಪಂದ್ಯ ನಾಳೆ ನೆಲ್ಸನ್ ನಲ್ಲಿ ನಡೆಯಲಿದೆ.
ಕಳೆದ ಮೂರು ವಿಶ್ವಕಪ್ ಗಳಲ್ಲಿ ಸೆಮಿಫೈನಲ್ ಹಾಗೂ ಫೈನಲ್ ಹಂತಕ್ಕೆ ಬಂದು ಸೋಲನುಭವಿಸುತ್ತಿರುವ ನ್ಯೂಜಿಲ್ಯಾಂಡ್ ತಂಡ ಕೂಡ ದಕ್ಷಿಣ ಆಫ್ರಿಕಾ ತಂಡದ ಹಾದಿಯಲ್ಲಿಯೇ ಸಾಗುತ್ತಿದೆ. ಆದರೆ ಸರಣಿಗಳನ್ನು ಗೆಲ್ಲುವ ವಿಚಾರದಲ್ಲಿ ನ್ಯೂಜಿಲ್ಯಾಂಡ್ ಮುಂದಿದೆ.
ಬಾಂಗ್ಲಾದೇಶ ತಂಡ ನಾಳೆ ಬಲಿಷ್ಠ ನ್ಯೂಜಿಲೆಂಡ್ ನೊಂದಿಗೆ ಯಾವ ರೀತಿ ಪ್ರದರ್ಶನ ತೋರಲಿದೆ ಎಂಬುದನ್ನು ಕಾದುನೋಡಬೇಕಾಗಿದೆ. ಐಪಿಎಲ್ ಹರಾಜಿನಲ್ಲಿ ನ್ಯೂಜಿಲ್ಯಾಂಡ್ ಹಾಗೂ ಆಸ್ಟ್ರೇಲಿಯಾ ತಂಡದ ಆಟಗಾರರೇ ಇಂದು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ.