ಮೂರನೇ ಟಿ ಟ್ವೆಂಟಿ ಪಂದ್ಯದಲ್ಲಿ ಭಾರತ ತಂಡ ಜಿಂಬಾಬ್ವೆ ಎದುರು 23 ರನ್ ಗಳಿಂದ ಭರ್ಜರಿ ಜಯ ಸಾಧಿಸುವ ಮೂಲಕ ಟಿ ಟ್ವೆಂಟಿ ಸರಣಿಯಲ್ಲಿ ಎರಡು ಒಂದರಿಂದ ಮುನ್ನಡೆ ಸಾಧಿಸಿದೆ. ಈ ಮೂಲಕ ಜಿಂಬಾಂಬ್ವೆ ನೆಲದಲ್ಲಿ ಸರಣಿ ಗೆಲ್ಲಲು ಶುಭಮನ್ ಗಿಲ್ ಪಡೆ ಸಜ್ಜಾಗಿದೆ.
ನಾಳೆ ಹರಾರೆಯಲ್ಲಿ ಭಾರತ ಹಾಗೂ ಜಿಂಬಾಂಬ್ವೆ ನಡುವೆ ನಾಲ್ಕನೇ ಟಿ ಟ್ವೆಂಟಿ ಪಂದ್ಯ ನಡೆಯಲಿದ್ದು ಜಿಂಬಾಂಬ್ವೆ ತಂಡಕ್ಕೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಈ ಪಂದ್ಯವನ್ನು ಗೆದ್ದರೆ ಸರಣಿಯನ್ನು ಸಮ ಬಲಗೊಳಿಸಬಹುದಾಗಿದೆ. ಇಲ್ಲವಾದಲ್ಲಿ ಜಿಂಬಾಂಬ್ವೆ ತಂಡಕ್ಕೆ ತನ್ನ ತವರಿನಲ್ಲಿ ಮುಖಭಂಗವಾಗಲಿದೆ.
ಇನ್ನು ಭಾರತ ತಂಡ ಈ ಪಂದ್ಯದಲ್ಲಿ ಜಯಭೇರಿ ಆದರೆ ಸರಣಿಯನ್ನು ತನ್ನದಾಗಿಸಿಕೊಳ್ಳಲಿದೆ ಉಭಯ ತಂಡಗಳಿಗೂ ಮುಖ್ಯವಾದ ಪಂದ್ಯವಾಗಿದ್ದು, ಯಾರ ಕಡೆಗೆ ಈ ಪಂದ್ಯ ವಾಲಲಿದೆ. ಕಾದು ನೋಡಬೇಕಾಗಿದೆ.