ಅಕ್ಟೋಬರ್ 19ರಂದು ಶರದ್ ಪೂರ್ಣಿಮಾವನ್ನು ಆಚರಿಸಲಾಗ್ತಿದೆ. ಈ ಹುಣ್ಣಿಮೆಯನ್ನು ಮಂಗಳಕರವೆಂದು ನಂಬಲಾಗಿದೆ. ಈ ದಿನ ಆಕಾಶದಿಂದ ಅಮೃತ ಮಳೆಯಾಗುತ್ತದೆ. ಲಕ್ಷ್ಮಿ ಆಶೀರ್ವಾದ ಭಕ್ತರಿಗೆ ಸಿಗುತ್ತದೆ ಎಂಬ ನಂಬಿಕೆಯಿದೆ. ಇದೇ ದಿನದಿಂದ ಚಳಿಗಾಲ ಶುರುವಾಗಲಿದೆ. ಚಂದ್ರನನ್ನು ಪೂಜಿಸಲಾಗುತ್ತದೆ. ಹುಣ್ಣಿಮೆ ದಿನ ಭೂಮಿಗೆ ಬೀಳುವ ಬೆಳಕಿನಲ್ಲಿ ಹಬ್ಬ ಆಚರಿಸಲಾಗುತ್ತದೆ.
ಶರದ್ ಪೂರ್ಣಿಮೆಯಂದು ಖೀರ್ ತಯಾರಿಸಿ, ಅದನ್ನು ಆಕಾಶಕ್ಕೆ ಅರ್ಪಿಸಲಾಗುತ್ತದೆ. ಇದೇ ದಿನ, ಲಕ್ಷ್ಮಿ ಸಮುದ್ರದ ಮಂಥನದಿಂದ ಜನಿಸಿದಳು ಎಂದು ನಂಬಲಾಗಿದೆ. ಈ ದಿನ ತಾಯಿ ಲಕ್ಷ್ಮಿ ಭೂಮಿಯಲ್ಲಿ ಸಂಚರಿಸಲು ಬರುತ್ತಾಳೆ. ರಾತ್ರಿ ಲಕ್ಷ್ಮಿ ಪೂಜೆ ಮಾಡುವವರಿಗೆ ವಿಶೇಷ ಫಲ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ಈ ರಾತ್ರಿ, ಚಂದ್ರನ ಬೆಳಕಿನಲ್ಲಿ ಅಮೃತದ ಮಳೆಯಾಗುತ್ತದೆ ಎಂಬ ನಂಬಿಕೆಯೂ ಇದೆ. ಪದ್ಧತಿಯಂತೆ ಚಂದ್ರನ ಪೂಜೆ ಮಾಡಬೇಕಾಗುತ್ತದೆ. ಹಾಗೆ ಈ ದಿನ ಕೆಲವೊಂದು ಕೆಲಸಗಳನ್ನು ಮಾಡಬಾರದು.
ಶರದ್ ಪೂರ್ಣಿಮೆಯ ದಿನ ಮಾಂಸ, ಮದ್ಯ ಸೇವನೆ ಮಾಡಬಾರದು. ಯಾವುದೇ ಹಣಕಾಸಿನ ವಹಿವಾಟು ಮಾಡಬಾರದು. ಬ್ರಹ್ಮಚರ್ಯವನ್ನು ಪಾಲಿಸಬೇಕು. ಮಹಿಳೆಯರಿಗೆ ಆಹಾರ ನೀಡಬೇಕು. ಹಾಗೆ ಕೆಲ ಉಡುಗೊರೆಗಳನ್ನು ನೀಡಬೇಕು. ಹಾಗೆ ಕರಿದ ಪದಾರ್ಥಗಳ ಸೇವನೆ ಮಾಡಬಾರದು. ಸೂರ್ಯಾಸ್ತದ ನಂತ್ರ ಕೂದಲನ್ನು ಬಾಚಿಕೊಳ್ಳಬಾರದು.
ಅಕ್ಟೋಬರ್ 19ರಂದು ರಾತ್ರಿ 7ರಿಂದ ಪೂರ್ಣಿಮೆ ಶುರುವಾಗಲಿದೆ. ಅಕ್ಟೋಬರ್ 20, ರಾತ್ರಿ 8.20ಕ್ಕೆ ಪೂರ್ಣಿಮೆ ಕೊನೆಗೊಳ್ಳಲಿದೆ.