ಅನೇಕ ರೈತ ಸಂಘಗಳು ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಫೆಬ್ರವರಿ 16 ರ ಶುಕ್ರವಾರ ಗ್ರಾಮೀಣ ಭಾರತ್ ಬಂದ್ ಅಥವಾ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿವೆ.ಕೇಂದ್ರ ಕಾರ್ಮಿಕ ಸಂಘಗಳು ಕರೆ ನೀಡಿರುವ ಗ್ರಾಮೀಣ ಭಾರತ್ ಬಂದ್ ನ ಭಾಗವಾಗಲು ಸಂಯುಕ್ತ ಕಿಸಾನ್ ಮೋರ್ಚಾ ಇತರ ಎಲ್ಲಾ ರೈತ ಸಂಘಗಳನ್ನು ಒಗ್ಗಟ್ಟಿನಿಂದ ಕೇಳಿದೆ. ಸಾರಿಗೆ ಮತ್ತು ಕೃಷಿ ಚಟುವಟಿಕೆಗಳ ಮೇಲೂ ಬಂದ್ ಪರಿಣಾಮ ಬೀರಲಿದೆ.
ಬಂದ್ ವೇಳೆ ಏನಿರುತ್ತದೆ, ಏನಿರಲ್ಲ ಎಂಬುದನ್ನು ನೋಡೋಣ.
ಏನಿರಲ್ಲ..?
– ಸಾರಿಗೆ ಚಟುವಟಿಕೆಗಳು
– ಕೃಷಿ ಚಟುವಟಿಕೆಗಳು
– ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಎನ್ಆರ್ಇಜಿಎ) ಗ್ರಾಮೀಣ ಕಾಮಗಾರಿಗಳು
– ಖಾಸಗಿ ಕಚೇರಿಗಳು
– ಹಳ್ಳಿಯ ಅಂಗಡಿಗಳು
– ಗ್ರಾಮೀಣ ಕೈಗಾರಿಕಾ ಮತ್ತು ಸೇವಾ ವಲಯದ ಸಂಸ್ಥೆಗಳು
ಯಾವುದರ ಮೇಲೆ ಪರಿಣಾಮ ಬೀರುವುದಿಲ್ಲ?
– ಆಂಬ್ಯುಲೆನ್ಸ್ ಕಾರ್ಯಾಚರಣೆ
– ಪತ್ರಿಕೆ ವಿತರಣೆ
– ಮದುವೆ ಸಮಾರಂಭ
– ಬೋರ್ಡ್ ಪರೀಕ್ಷೆ
– ಮದುವೆ ಸಮಾರಂಭ
ಏತನ್ಮಧ್ಯೆ, ಕೇಂದ್ರ ಸರ್ಕಾರದ ವಿರುದ್ಧ ಪಂಜಾಬ್ನಿಂದ ರೈತರು ನಡೆಸುತ್ತಿರುವ ‘ದೆಹಲಿ ಚಲೋ’ ಮೆರವಣಿಗೆ ಗುರುವಾರ ಮೂರನೇ ದಿನಕ್ಕೆ ಕಾಲಿಟ್ಟಿದೆ. ಸಮಸ್ಯೆಗಳ ಬಗ್ಗೆ ಚರ್ಚಿಸಲು ರೈತ ಸಂಘಗಳು ಮತ್ತು ಕೇಂದ್ರ ಸರ್ಕಾರದ ಸಭೆಯನ್ನು ಇಂದು ಸಂಜೆ ನಿಗದಿಪಡಿಸಲಾಗಿದೆ.
ರೈತರು ಕೇಂದ್ರ ಸರ್ಕಾರದ ಮುಂದೆ 12 ಬೇಡಿಕೆಗಳನ್ನು ಮುಂದಿಟ್ಟಿದ್ದು, ಅದಕ್ಕಾಗಿ ಅವರು ದೆಹಲಿಗೆ ಮೆರವಣಿಗೆ ನಡೆಸುತ್ತಿದ್ದಾರೆ. ಈ ಬಾರಿ ಪ್ರತಿಭಟನೆಗೆ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ರೈತ ಸಂಘದ ಮುಖಂಡರಾದ ಜಗಜೀತ್ ಸಿಂಗ್ ದಲ್ಲೆವಾಲ್ ಮತ್ತು ಸರ್ವನ್ ಸಿಂಗ್ ಪಂಧೇರ್ ನೇತೃತ್ವದ ಪಂಜಾಬ್ ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿ ಕರೆ ನೀಡಿದೆ.
ಪ್ರತಿಭಟನಾ ನಿರತ ರೈತರ ಪ್ರಕಾರ, ಕೇಂದ್ರವು ಅವರಿಗೆ ಉತ್ತಮ ಬೆಳೆ ಬೆಲೆಯ ಭರವಸೆ ನೀಡಿತು, ನಂತರ ಅವರು 2021 ರ ಪ್ರತಿಭಟನೆಯನ್ನು ಕೊನೆಗೊಳಿಸಿದರು. ಸ್ವಾಮಿನಾಥನ್ ಆಯೋಗದ ವರದಿಗೆ ಅನುಗುಣವಾಗಿ ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಖಾತರಿಪಡಿಸುವ ಕಾನೂನನ್ನು ಜಾರಿಗೆ ತರಬೇಕೆಂದು ಅವರು ಒತ್ತಾಯಿಸುತ್ತಿದ್ದಾರೆ.