![](https://kannadadunia.com/wp-content/uploads/2023/01/tomato-for-skin-care-1280x720-1-1024x576-1.jpg)
ಕಣ್ಣಿನ ಸುತ್ತ ಇರುವ ಕಪ್ಪು ಸರ್ಕಲ್ ನಿವಾರಣೆಗೆ ಸನ್ ಸ್ಕ್ರೀನ್ ಲೋಷನ್ ಅನ್ನೇ ಬಳಸಬೇಕಿಲ್ಲ. ಬದಲಾಗಿ ಮನೆಯಲ್ಲೇ ಸಿಗುವ ಕೆಲವು ವಸ್ತುಗಳನ್ನು ಪ್ರಯತ್ನಿಸಬಹುದು.
ಟೊಮೆಟೋ ನೈಸರ್ಗಿಕವಾಗಿ ಚರ್ಮವನ್ನು ಬ್ಲೀಚ್ ಮಾಡುವ ಮತ್ತು ಚರ್ಮಕ್ಕೆ ಹೊಳಪು ನೀಡುವ ಸಾಮರ್ಥ್ಯವನ್ನು ಹೊಂದಿದೆ. ಟೊಮೆಟೋ ಹಣ್ಣಿನಲ್ಲಿರುವ ಈ ಗುಣದಿಂದಾಗಿ ಕಣ್ಣಿನ ಸುತ್ತ ಆಗುವ ಕಪ್ಪು ವರ್ತುಲವನ್ನು ನಿವಾರಿಸಬಹುದು.
ಟೊಮೆಟೋಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿದ್ದು ಇದು ತ್ವಚೆಯನ್ನು ಆಕರ್ಷಕವಾಗಿಸುತ್ತದೆ. ಟೊಮೆಟೋ ರಸಕ್ಕೆ ಅಲೋವೆರಾ ರಸ ಬೆರೆಸಿ ಕಣ್ಣಿನ ತಳಭಾಗಕ್ಕೆ ಹಚ್ಚಿಕೊಳ್ಳಿ.
ಇದಕ್ಕೆ ಲಿಂಬೆರಸ ಬೆರೆಸಿ ಮುಖಕ್ಕೆ ಹಚ್ಚಿ ಹತ್ತು ನಿಮಿಷ ಬಳಿಕ ತೊಳೆಯುವುದರಿಂದ ತ್ವಚೆಯ ಸತ್ತ ಕೋಶಗಳು ತೊಲಗಿ ಮುಖ ಹೊಳೆಯುತ್ತದೆ.
ಟೊಮೆಟೋ ಮತ್ತು ಆಲೂಗಡ್ಡೆಯ ಪೇಸ್ಟ್ ಫೇಶಿಯಲ್ ನಂತೆ ಕೆಲಸ ಮಾಡುತ್ತದೆ. ಇದನ್ನು ವಾರಕ್ಕೊಮ್ಮೆ ಬಳಸಬಹುದು.