ಬೆಂಗಳೂರು: ಬೆಂಗಳೂರು -ಮೈಸೂರು ದಶಪಥ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ಆರಂಭವಾಗಿದ್ದು, ಇದರ ಬೆನ್ನಲ್ಲೇ ಪ್ರಯಾಣಿಕರಿಂದ 15 ರಿಂದ 20 ರೂಪಾಯಿ ಬಳಕೆದಾರರ ಶುಲ್ಕ ಸಂಗ್ರಹಿಸಲು ಕೆಎಸ್ಆರ್ಟಿಸಿ ಮುಂದಾಗಿದೆ.
ಮಾರ್ಚ್ 14 ರಿಂದ ಎಕ್ಸ್ ಪ್ರೆಸ್ ವೇನಲ್ಲಿ ಟೋಲ್ ಸಂಗ್ರಹ ಆರಂಭಿಸಲಾಗಿದೆ. ಸದರಿ ವೆಚ್ಚ ಸರಿದೂಗಿಸಲು ಕೆಎಸ್ಆರ್ಟಿಸಿ ಈ ಮಾರ್ಗದ ಮೂಲಕ ಸಂಚರಿಸುವ ಬಸ್ ಗಳಲ್ಲಿ ಪ್ರಯಾಣಿಕರಿಂದ ತಲಾ 15 -20 ರೂಪಾಯಿ ಸಂಗ್ರಹಿಸಲು ಮುಂದಾಗಿದೆ.
ಕೆಎಸ್ಆರ್ಟಿಸಿ ಬಸ್ ಗಳಲ್ಲಿ ಪ್ರಯಾಣಿಕರಿಂದ ತಲಾ 15 ರೂ., ರಾಜಹಂಸ ಬಸ್ ಗಳಲ್ಲಿ 18 ರೂ., ಮಲ್ಟಿ ಆಕ್ಸೆಲ್ ಸೇರಿದಂತೆ ಇತರೆ ಬಸ್ ಗಗಳಲ್ಲಿ ತಲಾ 20 ರೂಪಾಯಿ ಬಳಕೆದಾರರ ಶುಲ್ಕ ವಸೂಲಿ ಮಾಡಲಾಗುವುದು ಎಂದು ಹೇಳಲಾಗಿದೆ.