ಬೆಂಗಳೂರು: ಟೋಲ್ ಸಿಬ್ಬಂದಿಗೆ ಲಾಂಗ್ ತೋರಿಸಿ ಬೆದರಿಕೆ ಹಾಕಿ ಸಿಬ್ಬಂದಿಯನ್ನೇ ಲಾರಿಯಲ್ಲಿ ಎಳೆದೊಯ್ದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ನಲ್ಲೂರು ಟೋಲ್ ನಲ್ಲಿ ನಡೆದಿದೆ.
ಪಾರ್ಕಿಂಗ್ ಗೆ ಬೇರೆಡೆ ಸ್ಥಳವಿದ್ದರೂ ಟೋಲ್ ಬಳಿ ಲಾರಿ ಪಾರ್ಕಿಂಗ್ ಮಾಡಿದ್ದ ಲಾರಿ ಚಾಲಕ. ಇದಕ್ಕೆ ಟೋಲ್ ಸಿಬ್ಬಂದಿ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಟೋಲ್ ಸಿಬ್ಬಂದಿಗೆ ಲಾರಿ ಚಾಲಕ ಲಾಂಗ್ ತೋರಿಸಿ ಬೆದರಿಕೆ ಹಾಕಿದ್ದಾನೆ. ಟೋಲ್ ಸಿಬ್ಬಂದಿ ಹಾಗೂ ಲಾರಿ ಚಾಲಕನ ನಡುವೆ ಮಾತಿಗೆ ಮಾತು ಬೆಳೆದಿದೆ.
ಈ ವೇಳೆ ಲಾರಿ ಏರಿ ಮಾತನಾಡುತ್ತಿದ್ದ ಟೋಲ್ ಸಿಬ್ಬಂದಿಯನ್ನು ಲಾರಿಯಲ್ಲೇ ಎಳೆದೊಯ್ದಿದ್ದಾನೆ. ಲಾರಿಯಲ್ಲಿ ಟೋಲ್ ಸಿಬ್ಬಂದಿ ಎಳೆದೊಯ್ಯುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವೇಳೆ ಪೊಲೀಸರು ಲಾರಿಯನ್ನು ತಡೆದು, ಟೋಲ್ ಸಿಬ್ಬಂದಿಯನ್ನು ರಕ್ಷಿಸಿ, ಲಾರಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.