ಮೈಸೂರು: ಬೆಂಗಳೂರು -ಮೈಸೂರು ಎಕ್ಸ್ಪ್ರೆಸ್ ಹೆದ್ದಾರಿಯ ಎರಡನೇ ಟೋಲ್ ಶುರುವಾದ ನಂತರ ಕೆಎಸ್ಆರ್ಟಿಸಿ ಬಸ್ ಪ್ರಯಾಣದರ ಹೆಚ್ಚಳ ಮಾಡಲಾಗಿದೆ.
ಮೈಸೂರು -ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ ಕೆಎಸ್ಆರ್ಟಿಸಿ ಬಸ್ ಗಳ ಪ್ರಯಾಣ ದರವನ್ನು ಮಂಗಳವಾರದಿಂದ ಹೆಚ್ಚಳ ಮಾಡಲಾಗಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಟೋಲ್ ಜುಲೈ 1ರಿಂದ ಶುರುವಾಗಿದ್ದು, ಬಸ್ ಗಳಿಗೆ 525 ರೂ. ಟೋಲ್ ಶುಲ್ಕ ವಿಧಿಸಲಾಗುತ್ತಿದೆ. ಇದನ್ನು ಸರಿದೂಗಿಸಲು ಕೆಎಸ್ಆರ್ಟಿಸಿ ಈ ಮಾರ್ಗದಲ್ಲಿ ಟಿಕೆಟ್ ದರ ಹೆಚ್ಚಳ ಮಾಡಿದೆ.
ಸಾಮಾನ್ಯ ಸಾರಿಗೆ ಟಿಕೆಟ್ ದರ 15 ರೂಪಾಯಿ, ರಾಜಹಂಸ 20 ರೂಪಾಯಿ, ವೋಲ್ವೋ ಮತ್ತು ಎಲೆಕ್ಟ್ರಿಕ್ ಬಸ್ ಗಳಲ್ಲಿ 30 ರೂ. ಟಿಕೆಟ್ ದರ ಹೆಚ್ಚಳ ಮಾಡಲಾಗಿದೆ. ಬೆಂಗಳೂರಿನ ಕಣಮಿಣಕಿ, ರಾಮನಗರದ ಶೇಷಗಿರಿಹಳ್ಳಿ ಟೋಲ್ ಸಂಗ್ರಹ ಶುರುವಾದ ಸಂದರ್ಭದಲ್ಲಿ 20ರಿಂದ 35 ರೂಪಾಯಿವರೆಗೆ ಪ್ರಯಾಣದರ ಹೆಚ್ಚಳ ಮಾಡಲಾಗಿತ್ತು. ಈಗ ಮತ್ತೆ ಟಿಕೆಟ್ ದರ ಹೆಚ್ಚಳ ಮಾಡಲಾಗಿದೆ.