ಒಲಿಂಪಿಕ್ ಪಂದ್ಯಾವಳಿ ಆರಂಭವಾದ ನಂತರದಿಂದ ಟೋಕಿಯೋ ಇದೇ ಮೊದಲ ಬಾರಿಗೆ ಅತೀ ಹೆಚ್ಚು ಕೊರೊನಾ ಪ್ರಕರಣಗಳನ್ನ ವರದಿ ಮಾಡಿದೆ.
ಜಪಾನ್ ರಾಜಧಾನಿ ಟೋಕಿಯೋದಲ್ಲಿ ಒಂದೇ ದಿನದಲ್ಲಿ 2848 ಕೊರೊನಾ ಪ್ರಕರಣಗಳು ವರದಿಯಾಗಿದೆ. ಜನವರಿ 7 ರಂದು 2520 ಪ್ರಕರಣಗಳು ವರದಿಯಾಗಿತ್ತು. ಇಲ್ಲಿಯವರೆಗೆ ಇದೇ ಟೋಕಿಯೋದ ಅತೀ ಹೆಚ್ಚು 1 ದಿನದ ಕೊರೊನಾ ಪ್ರಕರಣದ ಸಂಖ್ಯೆಯಾಗಿತ್ತು.
ಈ ಮೂಲಕ ಟೋಕಿಯೋದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 2,00,000 ಆಗಿದೆ. ಶುಕ್ರವಾರದಿಂದ ಟೋಕಿಯೋದಲ್ಲಿ ಒಲಿಂಪಿಕ್ಸ್ ಆರಂಭವಾಗಿದ್ದು ಡೆಲ್ಟಾ ರೂಪಾಂತರಿಯು ಕೊರೊನಾ ಸೋಂಕು ಹೆಚ್ಚಾಗಲು ಪ್ರಮುಖ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.