ದಿವ್ಯಾಂಗ ಮಾನದಂಡದಲ್ಲಿ ತೇರ್ಗಡೆಯಾಗದೇ ಇರುವ ಕಾರಣ ಭಾರತೀಯ ಡಿಸ್ಕಸ್ ಎಸೆತಗಾರ ವಿನೋದ್ ಕುಮಾರ್ ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಗೆದ್ದ ಕಂಚಿನ ಪದಕ ಕಳೆದುಕೊಂಡಿದ್ದಾರೆ.
1971ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಗಾಯಗೊಂಡಿದ್ದ ಸೈನಿಕನ ಪುತ್ರನಾದ 41 ವರ್ಷ ವಯಸ್ಸಿನ ವಿನೋದ್ ಕುಮಾರ್ ಪುರುಷರ ಡಿಸ್ಕಸ್ ಥ್ರೋ ಫೈನಲ್ ಪಂದ್ಯದಲ್ಲಿ 19.91 ಮೀಟರ್ ದೂರಕ್ಕೆ ಡಿಸ್ಕಸ್ ಎಸೆಯುವ ಮೂಲಕ ಪೋಲೆಂಡ್‌ನ ಪಿಯೋಟರ್ ಕೊಸೆವಿಜ಼್ (20.02 ಮೀ) ಹಾಗೂ ಕ್ರೊಯೇಷ್ಯಾದ ವೆಲಿಮಿರ್ ಸಾಂಡರ್ (19.98 ಮೀ) ನಂತರದ ಸ್ಥಾನ ಪಡೆದಿದ್ದರು.
BIG BREAKING: ಭಾನುವಾರದ ಕ್ರೀಡಾ ದಿನವೇ ಭಾರತಕ್ಕೆ ಭರ್ಜರಿ ಖುಷಿ ಸುದ್ದಿ; ಒಂದೇ ದಿನ 3 ಪದಕ –ಡಿಸ್ಕಸ್ ಥ್ರೋನಲ್ಲಿ ಕಂಚು ಗೆದ್ದ ವಿನೋದ್
ಆದರೆ ಪ್ಯಾರಾಲಿಂಪಿಕ್ಸ್ ಆಯೋಜಕರು ವಿನೋದ್ ಕುಮಾರ್‌ರನ್ನು ದಿವ್ಯಾಂಗ ಮಾನದಂಡದಲ್ಲಿ ಅನರ್ಹರೆಂದು ಪರಿಗಣಿಸಿದ ಕಾರಣ ಕೂಟದ ಈ ಶಿಸ್ತಿನಲ್ಲಿ ಅವರ ಎಲ್ಲಾ ಫಲಿತಾಂಶಗಳನ್ನೂ ರದ್ದುಗೊಳಿಸಲಾಗಿದೆ.