ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದೆ. ಜಾವೆಲಿನ್ ಥ್ರೋನಲ್ಲಿ ಭಾರತದ ಸುಮಿತ್ ಆಂಟಿಲ್, ಚಿನ್ನದ ಪದಕ ಗೆದ್ದಿದ್ದಾರೆ. ಸುಮಿತ್ ಫೈನಲ್ ನಲ್ಲಿ 68.55 ಮೀಟರ್ ಎಸೆದು ವಿಶ್ವ ದಾಖಲೆ ಮಾಡಿದ್ದಾರೆ.
ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಇದು ಎರಡನೇ ಚಿನ್ನದ ಪದಕವಾಗಿದೆ. ಮೊದಲು, ಮಹಿಳಾ ಶೂಟರ್ ಅವನಿ ಲಖೇರಾ ಸೋಮವಾರ ಬೆಳಿಗ್ಗೆ ಚಿನ್ನದ ಪದಕ ಗೆದ್ದಿದ್ದರು. ಭಾರತವು ಇದುವರೆಗೆ 7 ಪದಕಗಳನ್ನು ಗೆದ್ದಿದೆ. ಅದರಲ್ಲಿ 2 ಚಿನ್ನದ ಪದಕ.
ಸುಮಿತ್ ತಮ್ಮ ಮೊದಲ ಪ್ರಯತ್ನದಲ್ಲಿ 66.95 ಮೀಟರ್ ಎಸೆದು ಫೈನಲ್ ಆರಂಭಿಸಿದ್ದರು. ಐದನೇ ಪ್ರಯತ್ನದಲ್ಲಿ 68.55 ಮೀಟರ್ ಎಸೆದು ಮೊದಲ ಸ್ಥಾನ ಪಡೆದಿದ್ದಾರೆ. ಸುಮಿತ್ ಎರಡನೇ ಪ್ರಯತ್ನದಲ್ಲಿ 68.08 ಮೀಟರ್ ಎಸೆದ್ರೆ, ಮೂರನೇ ಪ್ರಯತ್ನದಲ್ಲಿ 65.27 ಮೀಟರ್ ಹಾಗೂ ನಾಲ್ಕನೇ ಪ್ರಯತ್ನದಲ್ಲಿ 66.71 ಮೀಟರ್ ಎಸೆದ್ರು. ಆದರೆ ಅವರ ಆರನೇ ಮತ್ತು ಅಂತಿಮ ಎಸೆತವು ಫೌಲ್ ಆಗಿತ್ತು. ಭಾರತವು ಈ ಪ್ಯಾರಾಲಿಂಪಿಕ್ಸ್ ನಲ್ಲಿ ಇದುವರೆಗೆ ಎರಡು ಚಿನ್ನ, ನಾಲ್ಕು ಬೆಳ್ಳಿ ಮತ್ತು ಒಂದು ಕಂಚಿನ ಪದಕಗಳನ್ನು ಗೆದ್ದಿದೆ.