alex Certify ಪ್ಯಾರಾಲಂಪಿಕ್ಸ್‌ ಗೆ ಭಾರತೀಯ ಕ್ರೀಡಾಪಟುಗಳು ಸಜ್ಜು: ಇಲ್ಲಿದೆ ಕ್ರೀಡೆಗಳ ಸಂಪೂರ್ಣ ವೇಳಾಪಟ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ಯಾರಾಲಂಪಿಕ್ಸ್‌ ಗೆ ಭಾರತೀಯ ಕ್ರೀಡಾಪಟುಗಳು ಸಜ್ಜು: ಇಲ್ಲಿದೆ ಕ್ರೀಡೆಗಳ ಸಂಪೂರ್ಣ ವೇಳಾಪಟ್ಟಿ

ಟೋಕಿಯೋ ಒಲಿಂಪಿಕ್ಸ್ ​ನಲ್ಲಿ ಗಮನಾರ್ಹ ಸಾಧನೆ ತೋರಿರುವ ಭಾರತ ಇದೀಗ ಟೋಕಿಯೋ ಪ್ಯಾರಾ ಒಲಿಂಪಿಕ್ಸ್​ಗೆ ಸಜ್ಜಾಗಿದೆ. 1984 ರಿಂದ ಭಾರತ ಬೇಸಿಗೆ ಪ್ಯಾರಾಒಲಿಂಪಿಕ್ಸ್​ನಲ್ಲಿ ಭಾಗಿಯಾಗುತ್ತಲೇ ಬಂದಿದೆ. ರಿಯೋ ಪ್ಯಾರಾಒಲಿಂಪಿಕ್ಸ್​ನಲ್ಲಿ ಭಾರತದಿಂದ 19 ಮಂದಿ ಆಟಗಾರರು ಸ್ಪರ್ಧಿಸಿದ್ದರು. ಈ ಬಾರಿಯ ಟೋಕಿಯೋ ಪ್ಯಾರಾಒಲಿಂಪಿಕ್ಸ್​ನಲ್ಲಿ 9 ಸ್ಪರ್ಧೆಗಳಿಗೆ ಭಾರತದಿಂದ 54 ಆಟಗಾರರು ಕಣಕ್ಕೆ ಇಳಿಯಲಿದ್ದಾರೆ.

ಆರ್ಚರಿ, ಶೂಟಿಂಗ್​, ಟೇಬಲ್​ ಟೆನ್ನಿಸ್​, ಈಜು, ಬ್ಯಾಡ್ಮಿಂಟನ್​ ಸೇರಿದಂತೆ ಸಾಕಷ್ಟು ಕ್ರೀಡೆಗಳಲ್ಲಿ ಭಾರತೀಯ ಪ್ಯಾರಾ ಕ್ರೀಡಾಪಟುಗಳು ಪದಕ ಗೆಲ್ಲುವ ನಿರೀಕ್ಷೆಯಲ್ಲಿ ಇದ್ದಾರೆ. ಕಳೆದ ಬಾರಿಯ ಚಿನ್ನದ ಪದಕ ವಿಜೇತ, ಹೈ ಜಂಪರ್​​ ಮರಿಯಪ್ಪನ್​ ತಂಗವೇಲು ಟೋಕಿಯೋ ಪ್ಯಾರಾಒಲಿಂಪಿಕ್​ 2020ರಲ್ಲಿ ಭಾರತದ ಧ್ವಜವನ್ನು ಹಿಡಿಯಲಿದ್ದಾರೆ.

ಟೋಕಿಯೋ ಪ್ಯಾರಾಒಲಿಂಪಿಕ್​ 2020 ಇದೇ ತಿಂಗಳ 24 ರಿಂದ ಆರಂಭವಾಗಲಿದೆ. ಸೆಪ್ಟೆಂಬರ್​ 5ರಂದು ಈ ಅದ್ಧೂರಿ ಕಾರ್ಯಕ್ರಮಕ್ಕೆ ತೆರೆ ಬೀಳಲಿದೆ. ಡಿಡಿ ಸ್ಪೋರ್ಟ್ಸ್​​ನಲ್ಲಿ ಬೆಳಗ್ಗೆ 9 ಗಂಟೆಯಿಂದ ಪ್ಯಾರಾಒಲಿಂಪಿಕ್​ ಪ್ರಸಾರವಾಗಲಿದೆ. EUROSPORT ಹಾಗೂ EUROSPORT HD ಯಲ್ಲಿ ನೇರ ಪ್ರಸಾರ ವೀಕ್ಷಿಸಬಹುದಾಗಿದೆ. ಇದರ ಜೊತೆಯಲ್ಲಿ ಪ್ರಸಾರ ಭಾರತಿ ಯುಟ್ಯೂಬ್​ ಚಾನೆಲ್​ನಲ್ಲಿಯೂ ಕಾರ್ಯಕ್ರಮ ನೇರ ಪ್ರಸಾರ ಕಾಣಲಿದೆ.

ಆರ್ಚರಿ : ಶುಕ್ರವಾರ – ಆಗಸ್ಟ್​ 27

ಪುರುಷರ ರಿಕರ್ವ್ ಪ್ರತ್ಯೇಕ – ಹರ್ವಿಂದರ್​ ಸಿಂಗ್​, ವಿವೇಕ್​ ಚಿಕಾರ

ಪುರುಷರ ಕಂಪೌಂಡ್​ ಪ್ರತ್ಯೇಕ – ರಾಕೇಶ್​ ಕುಮಾರ್, ಶ್ಯಾಮ್​ ಸುಂದರ್​ ಸ್ವಾಮಿ

ಮಹಿಳೆಯರ ಕಂಪೌಂಡ್​ ಇಂಡಿವಿಜ್ಯೂವಲ್​ – ಜ್ಯೂತಿ ಬಲಿಯಾನ್​

ಕಂಪೌಂಡ್​​ ಮಿಶ್ರ ತಂಡ – ಜ್ಯೂತಿ ಬಲಿಯಾನ & ಟಿಬಿಸಿ

ಬ್ಯಾಡ್ಮಿಂಟನ್​ : ಬುಧವಾರ – ಸೆಪ್ಟೆಂಬರ್ 1

ಪುರುಷರ ಸಿಂಗಲ್ಸ್​ – ಪ್ರಮೋದ್​ ಭಾಗತ್​, ಮನೋಜ್​ ಸರ್ಕಾರ್​

ಮಹಿಳೆಯರ ಸಿಂಗಲ್ಸ್​ – ಪಾಲಕ್​ ಕೊಹ್ಲಿ

ಮಿಶ್ರ ಡಬಲ್ಸ್​​ – ಪ್ರಮೋದ್​ ಭಾಗತ್​ & ಪಾಲಕ್​ ಕೊಹ್ಲಿ

ಗುರುವಾರ ಸೆಪ್ಟೆಂಬರ್​ 2

ಪುರುಷರ ಸಿಂಗಲ್ಸ್ ಎಸ್​ಎಲ್​4 – ಸುಹಾಸ್​ ಲಲಿನಕೆರೆ ಯತಿರಾಜ್​, ತರುಣ್​ ಧಿಲ್ಲೋನ್​

ಪುರುಷರ ಸಿಂಗಲ್ಸ್​​​ ಎಸ್​ಎಸ್​6 – ಕೃಷ್ಣ ನಾಗರ್​

ಮಹಿಳೆಯರ ಸಿಂಗಲ್ಸ್​ ಎಸ್​ಎಲ್​4 – ಪಾರುಲ್​ ಪರ್ಮಾರ್​​

ಮಹಿಳೆಯರ ಡಬಲ್ಸ್​ ಎಸ್​ಎಲ್​3-ಎಸ್​​ಯು 5 – ಪಾರುಲ್​ ಪರ್ಮಾರ್​ & ಪಲಕ್​ ಕೊಹ್ಲಿ

ಪ್ಯಾರಾ ಕ್ಯಾನೋಯಿಂಗ್​​: ಗುರುವಾರ – ಸೆಪ್ಟೆಂಬರ್​​ 2

ಪುರುಷರು ವಿಎಲ್​​2 – ಪ್ರಾಚಿ ಯಾದವ್​​

ಪವರ್ ​ಲಿಫ್ಟಿಂಗ್: ಶುಕ್ರವಾರ – ಆಗಸ್ಟ್​ 27

ಪುರುಷರ 65 ಕೆಜಿ – ಜೈದೀಪ್​ ದೇಸ್ವಾಲ್​​

ಮಹಿಳೆಯರ 50 ಕೆಜಿ – ಸಾಕಿನಾ ಖಾತನ್​

ಈಜು : ಶುಕ್ರವಾರ – ಆಗಸ್ಟ್​ 27

200 ಪ್ರತ್ಯೇಕ ಮೆಡ್ಲೆ ಎಸ್​ಎಂ 7 – ಸುಯಶ್​ ಜಾಧವ್​

ಶುಕ್ರವಾರ, ಸೆಪ್ಟೆಂಬರ್​ 3

50 ಮೀ ಬಟರ್​ಫ್ಲೈ ಎಸ್​7 – ಸುಯಶ್​ ಜಾಧವ್​, ನಿರಂಜನ್​ ಮುಕುಂದನ್​

ಟೇಬಲ್​ ಟೆನ್ನಿಸ್: ಬುಧವಾರ – ಆಗಸ್ಟ್​ 25

ಪ್ರತ್ಯೇಕ ಸಿ 3 – ಸೊನಾಲ್​ಬೆನ್​ ಮಧುಬಾಯಿ ಪಟೇಲ್​

ಪ್ರತ್ಯೇಕ ಸಿ 4 – ಭವಿನಾ ಹಸ್ಮುಖ್​ಬಾಯಿ ಪಟೇಲ್​

ಟೇಕ್ವಾಂಡೋ : ಗುರುವಾರ – ಸೆಪ್ಟೆಂಬರ್​ 2

ಮಹಿಳೆ – 49 ಕೆಜಿ – ಅರುಣಾ ತನ್ವರ್​

ಶೂಟಿಂಗ್ : ಸೋಮವಾರ -​ ಆಗಸ್ಟ್​ 30

ಪುರುಷರ ಆರ್​ 1- 10 ಮೀ ಏರ್​ ರೈಫಲ್​​​ – ಸ್ವರೂಪ್​​ ಮಹಾವೀರ್​ ಉನ್ಹಾಲ್ಕರ್​, ದೀಪಕ್​ ಸೈನಿ

ಮಹಿಳೆ ಆರ್​2 – 10 ಮೀ ಏರ್​ ರೈಫಲ್​ – ಅವನಿ ಲೇಖಾರಾ

ಆಗಸ್ಟ್​ 31, ಮಂಗಳವಾರ

ಪುರುಷರ P1 – 10 m ಏರ್ ಪಿಸ್ತೂಲ್ SH1 – ಮನೀಶ್ ನರ್ವಾಲ್, ದೀಪೇಂದರ್ ಸಿಂಗ್, ಸಿಂಘ್ರಾಜ್

ಮಹಿಳೆಯರ P2 – 10 m ಏರ್ ಪಿಸ್ತೂಲ್ SH1 – ರುಬಿನಾ ಫ್ರಾನ್ಸಿಸ್

ಬುಧವಾರ – ಸೆಪ್ಟೆಂಬರ್ 1

ಮಿಕ್ಸೆಡ್ ಆರ್​ 3 – 10ಮೀ ಏರ್ ರೈಫಲ್ – ದೀಪಕ್ ಸೈನಿ, ಸಿಧಾರ್ಥ ಬಾಬು & ಅವನಿ ಲೇಖರ

ಗುರುವಾರ -ಸೆಪ್ಟೆಂಬರ್ 2

ಮಿಶ್ರ P3 – 25 ಮೀ ಪಿಸ್ತೂಲ್ Sh1 – ಆಕಾಶ್ ಮತ್ತು ರಾಹುಲ್ ಜಖರ್

ಶುಕ್ರವಾರ – ಸೆಪ್ಟೆಂಬರ್​ 3

ಪುರುಷರ R7 – 50 ಮೀ ರೈಫಲ್ 3 ಸ್ಥಾನಗಳು SH1 – ದೀಪಕ್ ಸೈನಿ

ಮಹಿಳೆಯರ ಆರ್ 8 – 50 ಮೀ ರೈಫಲ್ 3 ಸ್ಥಾನಗಳು SH1 – ಅವನಿ ಲೇಖಾರಾ

ಶನಿವಾರ – ಸೆಪ್ಟೆಂಬರ್ 4

ಮಿಶ್ರ P4 – 50 ಮೀ ಪಿಸ್ತೂಲ್ SH1 – ಆಕಾಶ್, ಮನೀಶ್ ನರ್ವಾಲ್ ಮತ್ತು ಸಿಂಘ್ರಾಜ್

ಭಾನುವಾರ – ಸೆಪ್ಟೆಂಬರ್ 5

ಮಿಕ್ಸೆಡ್ ಆರ್​ 6 – 50 ಮೀ ರೈಫಲ್ ಪ್ರೊನೆ ಎಸ್​ಹೆಚ್​ 1 – ದೀಪಕ್ ಸೈನಿ, ಅವನಿ ಲೇಖರ & ಸಿಧಾರ್ಥ ಬಾಬು

ಅಥ್ಲೆಟಿಕ್ಸ್​ : ಶನಿವಾರ – ಆಗಸ್ಟ್​ 28

ಪುರುಷರ ಜ್ಯಾವೆಲಿನ್ ಥ್ರೂ ಎಫ್​ 7 – ರಂಜೀತ್​ ಭಾಟಿ

ಭಾನುವಾರ – ಆಗಸ್ಟ್ 29

ಪುರುಷರ ಡಿಸ್ಕಸ್ ಥ್ರೋ ಎಫ್ 52 – ವಿನೋದ್ ಕುಮಾರ್

ಪುರುಷರ ಹೈ ಜಂಪ್ ಟಿ 47 – ನಿಶಾದ್ ಕುಮಾರ್, ರಾಮ್ ಪಾಲ್

ಸೋಮವಾರ – ಆಗಸ್ಟ್ 30

ಪುರುಷರ ಡಿಸ್ಕಸ್ ಥ್ರೋ ಎಫ್ 56 – ಯೋಗೀಶ್ ಕಠುನಿಯಾ

ಪುರುಷರ ಜಾವೆಲಿನ್ ಥ್ರೋ ಎಫ್ 46 – ಸುಂದರ್ ಸಿಂಗ್ ಗುರ್ಜಾರ್, ಅಜೀತ್ ಸಿಂಗ್, ದೇವೇಂದ್ರ ಜಜಾರಿಯಾ

ಪುರುಷರ ಜಾವೆಲಿನ್ ಥ್ರೋ ಎಫ್ 64 – ಸುಮಿತ್ ಆಂಟಿಲ್, ಸಂದೀಪ್ ಚೌಧರಿ

ಮಂಗಳವಾರ – ಆಗಸ್ಟ್ 31

ಪುರುಷರ ಹೈ ಜಂಪ್ ಟಿ 63 – ಶರದ್ ಕುಮಾರ್, ಮರಿಯಪ್ಪನ್ ತಂಗವೇಲು, ವರುಣ್ ಸಿಂಗ್ ಭಾಟಿ

ಮಹಿಳೆಯರ 100 ಮೀ ಟಿ 13 – ಸಿಮ್ರಾನ್

ಮಹಿಳಾ ಶಾಟ್ ಪುಟ್ ಎಫ್ 34 – ಭಾಗ್ಯಶ್ರೀ ಮಾದವರಾವ್ ಜಾಧವ್

ಬುಧವಾರ – ಸೆಪ್ಟೆಂಬರ್ 1

ಪುರುಷರ ಕ್ಲಬ್ ಥ್ರೋ ಎಫ್ 51 – ಧರಂಬೀರ್ ನೈನ್, ಅಮಿತ್ ಕುಮಾರ್ ಸರೋಹ

ಗುರುವಾರ – ಸೆಪ್ಟೆಂಬರ್ 2

ಪುರುಷರ ಶಾಟ್ ಪುಟ್ ಎಫ್ 35 – ಅರವಿಂದ ಮಲಿಕ್

ಶುಕ್ರವಾರ – ಸೆಪ್ಟೆಂಬರ್ 3

ಪುರುಷರ ಹೈ ಜಂಪ್ ಟಿ 64 – ಪ್ರವೀಣ್ ಕುಮಾರ್

ಪುರುಷರ ಜಾವೆಲಿನ್ ಥ್ರೋ ಎಫ್ 54 – ಟೆಕ್ ಚಂದ್

ಪುರುಷರ ಶಾಟ್ ಪುಟ್ ಎಫ್ 57 – ಸೋಮನ್ ರಾಣಾ

ಮಹಿಳಾ ಕ್ಲಬ್ ಥ್ರೋ ಎಫ್ 51 – ಏಕ್ತಾ ಭ್ಯಾನ್, ಕಾಶಿಶ್ ಲಕ್ರಾ

ಶನಿವಾರ – ಸೆಪ್ಟೆಂಬರ್ 4

ಪುರುಷರ ಜಾವೆಲಿನ್ ಥ್ರೋ ಎಫ್ 41 – ನವದೀಪ್ ಸಿಂಗ್

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...