ಟೋಕಿಯೊ ಒಲಿಂಪಿಕ್ಸ್ ನ 12 ನೇ ದಿನದಂದು ಭಾರತೀಯ ಪುರುಷರ ಹಾಕಿ ತಂಡ ಅಂತಿಮ ರೇಸ್‌ನಿಂದ ಹೊರಬಿದ್ದಿದೆ. ರೋಚಕ ಸೆಮಿಫೈನಲ್ ಪಂದ್ಯದಲ್ಲಿ, ವಿಶ್ವ ಚಾಂಪಿಯನ್ ಬೆಲ್ಜಿಯಂ ವಿರುದ್ಧ ಭಾರತ 5-2 ಅಂತರದಲ್ಲಿ ಸೋಲು ಕಂಡಿದೆ. ಫೈನಲ್ ಪ್ರವೇಶ ಮಾಡದೆ ಹೋದ್ರೂ ಟೀಮ್ ಇಂಡಿಯಾಕ್ಕೆ ಪದಕ ಗೆಲ್ಲುವ ಅವಕಾಶವಿದೆ. ಕಂಚಿನ ಪದಕಕ್ಕಾಗಿ ಟೀಂ ಇಂಡಿಯಾ ಸೆಣೆಸಲಿದೆ.
ಇಡೀ ದೇಶ, ಟೀಮ್ ಇಂಡಿಯಾ ಜೊತೆ ನಿಂತಿದೆ. ಟ್ವಿಟರ್ ನಲ್ಲಿ ಜನರು ತಮ್ಮದೇ ರೀತಿಯಲ್ಲಿ ತಂಡವನ್ನು ಪ್ರೋತ್ಸಾಹಿಸುತ್ತಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ, ಟ್ವೀಟ್ ಮಾಡಿದ್ದಾರೆ. ಗೆಲುವು ಮತ್ತು ಸೋಲು ಜೀವನದ ಭಾಗ. ಟೋಕಿಯೊ ಒಲಿಂಪಿಕ್ಸ್ 2020 ರಲ್ಲಿ ಪುರುಷರ ಹಾಕಿ ತಂಡ ಅತ್ಯುತ್ತಮ ಪ್ರದರ್ಶನ ನೀಡಿದೆ.ನಇದು ಬಹಳ ಮುಖ್ಯ. ಮುಂದಿನ ಪಂದ್ಯಕ್ಕೆ ಶುಭಾಶಯಗಳು. ಭಾರತ ತನ್ನ ಆಟಗಾರರ ಬಗ್ಗೆ ಹೆಮ್ಮೆ ಪಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಕ್ರೀಡಾ ಸಚಿವ ಅನುರಾಗ್ ಠಾಕೂರ್ ಕೂಡ ಹಾಕಿ ತಂಡದ ಬೆನ್ನಿಗೆ ನಿಂತಿದ್ದಾರೆ. ಭಾರತೀಯ ಹಾಕಿ ತಂಡ ಈ ಪಂದ್ಯವನ್ನು ಗೆದ್ದಿದ್ದರೆ ಫೈನಲ್ ಪ್ರವೇಶ ಮಾಡ್ತಿತ್ತು. ಚಿನ್ನ ಇಲ್ಲವೆ ಬೆಳ್ಳಿ ಪದಕ ಖಾತ್ರಿಯಾಗಿತ್ತು. ಆದರೆ ಅದು ಸಾಧ್ಯವಾಗಿಲ್ಲ. ಟೀಂ ಇಂಡಿಯಾ ಕೊನೆಯದಾಗಿ 1980 ರ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದಿತ್ತು.