ಟೋಕಿಯೋ ಒಲಿಂಪಿಕ್ಸ್ನಲ್ಲಿ 65 ಕೆಜಿ ಪುರುಷರ ಫ್ರೀ ಸ್ಟೈಲ್ ವಿಭಾಗದಲ್ಲಿ ನಂ.2 ವಿಶ್ವ ಶ್ರೇಯಾಂಕಿತ ಭಾರತದ ಕುಸ್ತಿಪಟು ಬಜರಂಗ್ ಪೂನಿಯಾ ಪರಾಭವಗೊಂಡಿದ್ದಾರೆ. ಈ ಮೂಲಕ ಬಜರಂಗ್ ಕೈಯಿಂದ ಬೆಳ್ಳಿ ಪದಕ ಮಿಸ್ ಆಗಿದೆ. ಅಝೆರ್ಬೈಜಾನ್ನ ಹಾಜಿ ಅಲಿಯೇವ್ ವಿರುದ್ಧ ಪೂನಿಯಾ 12-5 ಅಂತರದಲ್ಲಿ ಪರಾಭವಗೊಂಡರು.
ನಾಳೆ ಪೂನಿಯಾ ಕಂಚಿನ ಪದಕಕ್ಕಾಗಿ ಸೆಣೆಸಾಟ ನಡೆಸಲಿದ್ದಾರೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪುನಿಯಾ ಇರಾನಿನ ಮೊರ್ತೆಜಾ ಘಿಯಾಸಿ ಚೆಕಾ ವಿರುದ್ಧ 2-1 ಅಂತರದಲ್ಲಿ ಗೆಲ್ಲುವ ಮೂಲಕ ಪೂನಿಯಾ ಸೆಮಿಫೈನಲ್ ಪ್ರವೇಶಿಸಿದ್ದರು. ನಾಳೆ ಪೂನಿಯಾ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾದಲ್ಲಿ ಇದು ಅವರ ವೃತ್ತಿ ಜೀವನದ ಮೊದಲ ಒಲಿಂಪಿಕ್ ಪದಕ ಎನಿಸಲಿದೆ.