ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತೀಯ ಮಹಿಳಾ ಹಾಕಿ ತಂಡ ಸೆಮಿಫೈನಲ್ ನಲ್ಲಿ ಸೋಲುಂಡಿದೆ. ಅರ್ಜೆಂಟೀನಾ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮಹಿಳಾ ತಂಡ 1-2 ಅಂತರದಲ್ಲಿ ಸೋಲುಂಡಿದೆ. ಟೀಂ ಇಂಡಿಯಾ ಕಂಚಿನ ಪದಕಕ್ಕಾಗಿ ಹೋರಾಟ ನಡೆಸಲಿದೆ.
ಪಂದ್ಯದಲ್ಲಿ ಟೀಂ ಇಂಡಿಯಾ ಉತ್ತಮ ಆರಂಭ ಮಾಡಿತ್ತು. ಆರಂಭದ ನಿಮಿಷಗಳಲ್ಲಿ ಭಾರತದ ಗುರ್ಜಿತ್ ಸಿಂಗ್ ಗೋಲು ಗಳಿಸಿದರು. ಗೋಲಿನ ನಂತರ ಅರ್ಜೆಂಟೀನಾ ಸಾಕಷ್ಟು ಆಕ್ರಮಣಕಾರಿ ಆಟವನ್ನು ತೋರಿಸಿತು. ಅರ್ಜೆಂಟೀನಾ ಕೂಡ ಒಂದು ಅಂಕ ಗಳಿಸಲು ಸಫಲವಾಗಿತ್ತು. ಆದ್ರೆ ಅರ್ಜೆಂಟೀನಾ 2 ಅಂಕ ಗಳಿಸಿ ಗೆಲುವು ಸಾಧಿಸಿದೆ.
ಭಾರತೀಯ ಮಹಿಳಾ ಹಾಕಿ ತಂಡ, ಒಲಿಂಪಿಕ್ಸ್ ನ ಸೆಮಿಫೈನಲ್ ತಲುಪುವ ಮೂಲಕ ಇತಿಹಾಸವನ್ನು ಸೃಷ್ಟಿಸಿದೆ. ಕ್ಯಾಪ್ಟನ್ ರಾಣಿ ರಾಂಪಾಲ್ ನೇತೃತ್ವದ ಮಹಿಳಾ ತಂಡವು ವಿಶ್ವ ನಂಬರ್ ಒನ್ ತಂಡ ನೆದರ್ಲೆಂಡ್ಸ್ ವಿರುದ್ಧ 1-5, ಜರ್ಮನಿ ವಿರುದ್ಧ 0-2 ಮತ್ತು ಗ್ರೇಟ್ ಬ್ರಿಟನ್ ವಿರುದ್ಧ 1-4 ಅಂಕದಲ್ಲಿ ಗೆಲುವು ಸಾಧಿಸಿತ್ತು. ಐರ್ಲ್ಯಾಂಡ್ ವಿರುದ್ಧ 1-0 ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ 4-3ರ ಅಂತರದಲ್ಲಿ ಗೆಲುವು ಸಾಧಿಸಿ ಸೆಮಿಫೈನಲ್ ತಲುಪಿತ್ತು.