ಟೋಕಿಯೊ ಒಲಂಪಿಕ್ಸ್ ನಲ್ಲಿ ಭಾರತೀಯ ಮಹಿಳಾ ಹಾಕಿ ತಂಡಕ್ಕೆ ಕಂಚಿನ ಪದಕ ಕೈತಪ್ಪಿದೆ. ರೋಚಕ ಕಂಚಿನ ಪದಕ ಹೋರಾಟದಲ್ಲಿ ಬ್ರಿಟನ್ 4-3 ಅಂತರದಲ್ಲಿ ಗೆಲುವು ಸಾಧಿಸಿದೆ. ಕಂಚಿನ ಪದಕ ಕೈತಪ್ಪಿದ್ರೂ ಭಾರತೀಯ ಮಹಿಳಾ ಆಟಗಾರರು ದೇಶದ ಕೀರ್ತಿ ಬೆಳಗಿದ್ದಾರೆ. ಅದ್ಬುತ ಹಾಗೂ ಆಕ್ರಮಣಕಾರಿ ಆಟ ಪ್ರದರ್ಶಿಸಿ ಸೋತು ಗೆದ್ದಿದ್ದಾರೆ.
ಒಲಂಪಿಕ್ಸ್ ಇತಿಹಾಸದಲ್ಲಿ ಭಾರತೀಯ ಮಹಿಳಾ ಹಾಕಿ ತಂಡ ಇದೇ ಬಾರಿ ಸೆಮಿಫೈನಲ್ ಪ್ರವೇಶ ಮಾಡಿತ್ತು. ಸೆಮಿಫೈನಲ್ ಪಂದ್ಯದಲ್ಲಿ ಸೋತು, ಕಂಚಿಗಾಗಿ ಹೋರಾಟಕ್ಕಿಳಿದಿತ್ತು. ಇದೇ ಮೊದಲ ಬಾರಿ ಕಂಚಿಗಾಗಿ ಹೋರಾಟ ನಡೆಸುವ ಮೂಲಕ ಭಾರತ ಮಹಿಳಾ ತಂಡ ಇತಿಹಾಸ ಬರೆದಿದೆ. ಭಾರತೀಯ ಮಹಿಳಾ ಹಾಕಿ ತಂಡದ ಪ್ರದರ್ಶನಕ್ಕೆ ಭಾರತೀಯರು ಸಂತೋಷಗೊಂಡಿದ್ದಾರೆ. ಇದು ಹೊಸ ಆರಂಭವೆಂದು ಪರಿಗಣಿಸಲಾಗ್ತಿದೆ.
ಬ್ರಿಟನ್ ವಿರುದ್ಧ ಸೋಲುಂಡ ಭಾರತೀಯ ಆಟಗಾರ್ತಿಯರು ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಈ ಮಧ್ಯೆ ಭಾರತೀಯ ಮಹಿಳಾ ಹಾಕಿ ತಂಡದ ಭಾಗವಾಗಿರುವ ಹರಿಯಾಣದ ಒಂಬತ್ತು ಹೆಣ್ಣು ಮಕ್ಕಳಿಗೆ ತಲಾ 50 ಲಕ್ಷ ನಗದು ಬಹುಮಾನವನ್ನು ಸರ್ಕಾರ ಘೋಷಿಸಿದೆ.