
ಟೋಕಿಯೊ ಒಲಂಪಿಕ್ಸ್ ನಲ್ಲಿ ಭಾರತೀಯ ಮಹಿಳಾ ಹಾಕಿ ಇತಿಹಾಸ ರಚಿಸಿದೆ. ಭಾರತ ಮಹಿಳಾ ಹಾಕಿ ತಂಡ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಗೆಲುವು ದಾಖಲಿಸಿದೆ. ಭಾರತೀಯ ಮಹಿಳಾ ಹಾಕಿ ತಂಡ ಮೊದಲ ಬಾರಿಗೆ ಒಲಿಂಪಿಕ್ಸ್ ನ ಸೆಮಿಫೈನಲ್ ಪ್ರವೇಶಿಸಿದೆ.
ಭಾರತದ ಪರ, ಗುರ್ಜಿತ್ ಕೌರ್ ಏಕೈಕ ಗೋಲು ಬಾರಿಸಿದ್ರು. ಆದರೆ ಬಲಿಷ್ಠ ಆಸ್ಟ್ರೇಲಿಯಾ ತಂಡವು ಪಂದ್ಯದಲ್ಲಿ ಒಂದೇ ಒಂದು ಗೋಲು ಗಳಿಸಲಿಲ್ಲ. ಭಾರತ ಮಹಿಳಾ ತಂಡದ ಮುಂದೆ ಆಸ್ಟ್ರೇಲಿಯಾ ಮಹಿಳಾ ಆಟಗಾರರು ಸೋತು ಶರಣಾದ್ರು.
ಭಾರತೀಯ ಮಹಿಳಾ ಹಾಕಿ ತಂಡ, ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡ್ತ ಬಂದಿದೆ. ಆಸ್ಟ್ರೇಲಿಯಾ ವಿರುದ್ಧ ಉತ್ತಮ ಆರಂಭ ಶುರು ಆಡಿದ ತಂಡ, ಆಕ್ರಮಣಕಾರಿ ಮನೋಭಾವವನ್ನು ಅಳವಡಿಸಿಕೊಂಡಿತು.