alex Certify ಒಲಂಪಿಕ್‌ 2020: ಇಲ್ಲಿದೆ ಜುಲೈ 31 ರವರೆಗೆ ಭಾರತೀಯ ಕ್ರೀಡಾಪಟುಗಳು ಭಾಗವಹಿಸುವ ಸ್ಪರ್ಧೆಗಳ ಪಟ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಲಂಪಿಕ್‌ 2020: ಇಲ್ಲಿದೆ ಜುಲೈ 31 ರವರೆಗೆ ಭಾರತೀಯ ಕ್ರೀಡಾಪಟುಗಳು ಭಾಗವಹಿಸುವ ಸ್ಪರ್ಧೆಗಳ ಪಟ್ಟಿ

ಇಡೀ ವಿಶ್ವವು ಇನ್ನೂ ಕೊರೊನಾ ವಿರುದ್ಧದ ಹೋರಾಟದಲ್ಲೇ ಇರುವ ನಡುವೆಯೇ ಜಪಾನ್​ನಲ್ಲಿ ಒಲಿಂಪಿಕ್​ ಆಟದ ಕ್ರೇಜ್​ ಹೆಚ್ಚಾಗುತ್ತಿದೆ. ಕೊರೊನಾದಿಂದಾಗಿ 1 ವರ್ಷಗಳ ಕಾಲ ಮುಂದೂಡಿಕೆಯಾಗಲ್ಪಟ್ಟಿದ್ದ ಒಲಿಂಪಿಕ್​​ ಪಂದ್ಯ ಆರಂಭಕ್ಕೆ ಇದೀಗ ದಿನಗಣನೆ ಶುರುವಾಗಿದೆ.

ಟೋಕಿಯೋ ಒಲಿಂಪಿಕ್ಸ್​ ಇದೇ 23ರಂದು ಆರಂಭಗೊಳ್ಳಲಿದ್ದು ಆಗಸ್ಟ್​​ 8ನೇ ತಾರೀಖಿನಂದು ಕೊನೆಗೊಳ್ಳಲಿದೆ. ಈ ಬಾರಿಯ ಒಲಿಂಪಿಕ್ಸ್​ನಲ್ಲಿ ಭಾರತದಿಂದ 119 ಕ್ರೀಡಾಪಟುಗಳು ಭಾಗಿಯಾಗುತ್ತಿದ್ದಾರೆ.

ಇದರಲ್ಲಿ 67 ಪುರುಷ ಆಟಗಾರರು ಹಾಗೂ 52 ಮಹಿಳಾ ಆಟಗಾರರು ಇದ್ದಾರೆ. ಈ ಆಟಗಾರರಲ್ಲಿ 45 ವರ್ಷದ ಸ್ಕೀಟ್​ ಶೂಟರ್​​ ಮೈರಾಜ್​ ಅಹಮದ್​ ಖಾನ್​ ಅತ್ಯಂತ ಹಿರಿಯ ಭಾರತೀಯ ಆಟಗಾರ ಆಗಿದ್ದಾರೆ. 10 ಎಎಂ ರೈಫಲ್​ ಶೂಟರ್​ ಆಟಗಾರ್ತಿ 18 ವರ್ಷದ ದಿವ್ಯಾಂಶ್​​ ಸಿಂಗ್​ ಪನ್ವಾರ್​​ ಕಿರಿಯ ಭಾರತೀಯ ಆಟಗಾರ್ತಿ ಎನಿಸಿದ್ದಾರೆ.

ಜುಲೈ 23ರಿಂದ ಜುಲೈ 31ರೊಳಗೆ ನಡೆಯುವ ಪಂದ್ಯಗಳಲ್ಲಿ ಭಾರತೀಯ ಆಟಗಾರರ ಪಟ್ಟಿ ಇಲ್ಲಿದೆ :

ಆರ್ಚರಿ

ಜುಲೈ 23 : ಪುರುಷ ಹಾಗೂ ಮಹಿಳಾ ವಿಭಾಗದ ಅರ್ಹತಾ ಸುತ್ತು

ಜುಲೈ 24 : ಮಿಶ್ರ ಟೀಂನ ಎಲಿಮಿನೇಷನ್​ ಸುತ್ತು – ಅಟಾನುದಾಸ್​, ದೀಪಿಕಾ ಕುಮಾರಿ

ಜುಲೈ 26: ಪುರುಷರ ವಿಭಾಗದ ಟೀಂ ಎಲಿಮಿನೇಷನ್, ಮೆಡಲ್​ ಮ್ಯಾಚ್​ – ಅಟಾನು ದಾಸ್​, ಪ್ರವೀಣ್​ ಜಾಧವ್​, ತರುಣ್​ದೀಪ್​ ರೈ

ಜುಲೈ 27 – ಪುರುಷ ಹಾಗೂ ಮಹಿಳಾ ವಿಭಾಗದ ಎಲಿಮಿನೇಷನ್​ ಪಂದ್ಯ

ಜಿಮ್ನಾಸ್ಟಿಕ್ಸ್

ಜುಲೈ 25 : ಮಹಿಳಾ ಆರ್ಟಿಸ್ಟಿಕ್​​ ಜಿಮ್ನಾಸ್ಟಿಕ್ಸ್​ ಅರ್ಹತಾ ಸುತ್ತು – ಪ್ರಣತಿ ನಾಯಕ್​

ಜುಲೈ 29 ರಿಂದ ಆಗಸ್ಟ್​ 3 : ಮಹಿಳಾ ಆರ್ಟಿಸ್ಟಿಕ್​​ ಜಿಮ್ನಾಸ್ಟಿಕ್ಸ್​ ಆಲ್​ ರೌಂಡ್​ ಹಾಗೂ ಇವೆಂಟ್ಸ್​ ಫೈನಲ್​ – ಪ್ರಣತಿ ನಾಯಕ್​

ಟ್ರ್ಯಾಕ್​ & ಫೀಲ್ಡ್

ಜುಲೈ 30 : 3000 ಮೀ ಹಳ್ಳಿಗಾಲೋಟ – ಅವಿನಾಶ್​ ಸಬ್ಲೆ

ಜುಲೈ 30 : 400 ಮೀ ಹರ್ಡಲ್ಸ್​ ಮೊದಲ ಸುತ್ತು – ಎಂಪಿ ಜಬೀರ್​​

ಜುಲೈ 30 : 100 ಮೀ ಮಹಿಳೆಯ ಮೊದಲ ಸುತ್ತು – ಡುಟಿ ಚಾಂದ್​

ಜುಲೈ 30 : 4×400ಮೀ ಮಿಶ್ರ ರಿಲೇ ಪ್ರಥಮ ಸುತ್ತು – ಅಲೆಕ್ಸ್​ ಆಂಟೋನಿ, ಸಾರ್ಥಕ್​ ಬಾಂಬ್ರಿ, ರೇವತಿ ವೀರಮಣಿ, ಶುಭಾ ವೆಂಕಟೇಶನ್​​

ಜುಲೈ 31 : ಮಹಿಳೆಯ ಚಕ್ರ ಎಸೆತ ಅರ್ಹತಾ ಸುತ್ತು – ಸೀಮಾ ಪುನಿಯಾ, ಕಮಲ್​ಪ್ರೀತ್​ ಕೌರ್​

ಜುಲೈ 31 : ಉದ್ದಜಿಗಿತ ಪುರುಷರ ಅರ್ಹತಾ ಪಂದ್ಯ – ಎಂ ಶ್ರೀಶೇಖರನ್​

ಜುಲೈ 31 : 4×400ಮೀ ಮಿಶ್ರ ರಿಲೇ ಅಂತಿಮ ಸುತ್ತು – ಅಲೆಕ್ಸ್ ಆಂಟೋನಿ, ಸಾರ್ಥಕ್​ ಭಾಂಬ್ರಿ, ರೇವತಿ ವೀರಮಣಿ, ಶುಭಾ ವೆಂಕಟೇಶನ್​

ಜುಲೈ 31 : 100 ಮೀ ಸೆಮಿ ಫೈನಲ್​ ಹಾಗೂ ಫೈನಲ್​ ಪಂದ್ಯ – ಡುಟಿ ಚಂದ್​ (ಆಯ್ಕೆಯಾದಲ್ಲಿ)

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...