ಟೋಕಿಯೋ: ಒಂದು ವಾರದ ಹಿಂದಷ್ಟೇ ಶುರುವಾಗಿದ್ದ ಒಲಿಂಪಿಕ್ಸ್ ಹಲವು ಕೌತುಕಗಳನ್ನು ಸೃಷ್ಟಿಸಿದೆ. ಕ್ರೀಡಾಳುಗಳು ಕೂಡ ಭಾರಿ ಉತ್ಸಾಹದಲ್ಲಿದ್ದಾರೆ.
ತರಬೇತುದಾರರು ಕೂಡ ತಮ್ಮ ವಿದ್ಯಾರ್ಥಿಗಳಿಗೆ ಗೆಲ್ಲಲೇ ಬೇಕು ಅಂತಾ ಬೆನ್ನು ತಟ್ಟಿ ಪ್ರೋತ್ಸಾಹ ನೀಡುತ್ತಾರೆ. ಇಂಥದ್ದೇ ಒಂದು ಆಶ್ಚರ್ಯಕರ ಘಟನೆಗೆ ಸಾಕ್ಷಿಯಾಗಿದೆ ಟೋಕಿಯೋ ಒಲಿಂಪಿಕ್ಸ್.
ಹೌದು, ಸ್ಪರ್ಧಿಯು ಪಂದ್ಯಕ್ಕೆ ತೆರಳುತ್ತಿರುವ ವೇಳೆಗೆ ಕೋಚ್ ಕೆನ್ನೆಗೆ ಹೊಡೆದಿದ್ದಾರೆ. ಈ ದೃಶ್ಯ ಇದೀಗ ಭಾರಿ ವೈರಲ್ ಆಗಿದೆ. ಮಾರ್ಟಿನಾ ಟ್ರಾಜ್ಡೋಸ್ ಎಂಬ ಸ್ಪರ್ಧಿಗೆ ತಮ್ಮ ಕೋಚ್ ಕಪಾಳಮೋಕ್ಷ ಮಾಡುವ ಮುಖಾಂತರ ಒಳ್ಳೆಯದಾಗಲಿ ಅಂತಾ ಶುಭಾಶಯ ತಿಳಿಸಿದ್ದಾರೆ. ಮುಂದಿನಿಂದ ಸ್ಪರ್ಧಿ ಹೋಗುತ್ತಿದ್ದರೆ ಹಿಂದಿನಿಂದ ಬಂದ ತರಬೇತುದಾರ ಆಕೆಯ ಬಟ್ಟೆ ಕಾಲರ್ ಹಿಡಿದೆಳೆದು ಕಪಾಳಮೋಕ್ಷ ಮಾಡಿದ್ದಾರೆ.
BIG BREAKING: ಮೂರು ಜಿಲ್ಲೆಯಲ್ಲಿ ಜೀರೋ, ದಕ್ಷಿಣ ಕನ್ನಡದಲ್ಲಿ ಭಾರೀ ಏರಿಕೆ -ಇಲ್ಲಿದೆ ಜಿಲ್ಲಾವಾರು ಡಿಟೇಲ್ಸ್
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ವಿಡಿಯೋ ನೋಡಿದ ನೆಟ್ಟಿಗರು ಗೊಂದಲಕ್ಕೀಡಾಗಿದ್ದಾರೆ. ಸ್ಪರ್ಧಿ ಗೆಲ್ಲುವಲ್ಲಿ ತರಬೇತುದಾರರ ಪಾತ್ರವೂ ಬಹಳ ಮುಖ್ಯವಾಗಿದೆ. ಹೀಗಾಗಿ ಪಂದ್ಯದಲ್ಲಿ ಗೆಲ್ಲಲೇಬೇಕು ಅಂತಾ ತರಬೇತುದಾರರು ಈ ರೀತಿ ಒತ್ತಡ ಹೇರುವುದು ಸಾಮಾನ್ಯವಾಗಿದೆ.