alex Certify ʼಬೆಳ್ಳಿʼ ಗೆದ್ದ ಮೀರಾಬಾಯ್ ಗೆ ಜೀವನಪೂರ್ತಿ ಉಚಿತ ಪಿಜ್ಜಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಬೆಳ್ಳಿʼ ಗೆದ್ದ ಮೀರಾಬಾಯ್ ಗೆ ಜೀವನಪೂರ್ತಿ ಉಚಿತ ಪಿಜ್ಜಾ

ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ತಂದುಕೊಟ್ಟ ಮೀರಾಬಾಯ್ ಚಾನುಗೆ ಜೀವನಪೂರ್ತಿ ಉಚಿತ ಪಿಜ್ಜಾ ಡೆಲಿವರಿ ಮಾಡುವುದಾಗಿ ಮಾತು ಕೊಟ್ಟ ಡೊಮಿನೋಸ್ ಸಾಮಾಜಿಕ ಜಾಲತಾಣದಲ್ಲಿರುವ ತನ್ನ ವಾಲ್‌ನಲ್ಲಿ ವೇಟ್‌ಲಿಫ್ಟರ್‌ನ ಕುಟುಂಬವನ್ನು ಮೆಚ್ಚಿ ಕೊಂಡಾಡಿದೆ.

ಮಣಿಪುರದ ರಾಜಧಾನಿ ಇಂಪಾಲದಲ್ಲಿರುವ ಮೀರಾಬಾಯ್ ಚಾನು ಕುಟುಂಬಕ್ಕೆ ಅದಾಗಲೇ ಪಿಜ್ಜಾಗಳನ್ನು ಕಳುಹಿಸಿರುವ ಡೊಮಿನೋಸ್, ಈ ಕ್ಷಣಗಳನ್ನು ಶೇರ್‌ ಮಾಡಿಕೊಂಡು, “ಈ ಸುಂದರ ಕ್ಷಣವನ್ನು ಮೀರಾಬಾಯ್ ಚಾನುರ ಪ್ರೀತಿಪಾತ್ರರೊಂದಿಗೆ ಹಂಚಿಕೊಳ್ಳುವುದಕ್ಕೆ ಅವಕಾಶ ಸಿಕ್ಕಿದ್ದಕ್ಕೆ ನಮಗೆ ಖುಷಿಯಾಗಿದೆ. ಆಕೆ ಶತಕೋಟಿ ಮುಖಗಳ ಮೇಲೆ ಸಂತಸ ತಂದಿದ್ದಾರೆ. ನಮ್ಮ ಡೊಮಿನೋಸ್‌ನ ಇಂಪಾಲದ ತಂಡ ಈ ಖುಷಿಯಲ್ಲಿ ಸಣ್ಣದೊಂದು ಮೆಚ್ಚುಗೆಯ ರೂಪದಲ್ಲಿ ಆಕೆಯ ಕುಟುಂಬದೊಂದಿಗೆ ಆಕೆಯ ಯಶಸ್ಸನ್ನು ಸಂಭ್ರಮಿಸುತ್ತಿದೆ” ಎಂದು ಡೊಮಿನೋಸ್ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದೆ.

ಕಚೇರಿಯಲ್ಲಿ ಈ ಬಣ್ಣದ ಕುರ್ಚಿಯಿದ್ರೆ ಈಗ್ಲೇ ಬದಲಿಸಿ

ಜುಲೈ 24ರಂದು ವೇಟ್‌ ಲಿಫ್ಟಿಂಗ್‌ನಲ್ಲಿ ಬೆಳ್ಳಿ ಪದಕ ಗೆಲ್ಲುತ್ತಲೇ ಮಾತನಾಡಿದ್ದ ಚಾನು, “ಎಲ್ಲಕ್ಕಿಂತ ಮೊದಲು ನಾನು ಪಿಜ್ಜಾ ತಿನ್ನಲು ಇಚ್ಛಿಸುತ್ತೇನೆ. ನಾನು ಅದನ್ನು ತಿಂದು ಬಹಳ ಕಾಲ ಆಗಿದೆ. ಇಂದು ನಾನು ವಿಪರೀತ ಪಿಜ್ಜಾ ತಿನ್ನುವೆ” ಎಂದಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...