ಟೋಕಿಯೊ ಒಲಂಪಿಕ್ಸ್ ನಲ್ಲಿ ಭಾರತದ ಆಟಗಾರ ನೀರಜ್ ಚೋಪ್ರಾ ಇತಿಹಾಸ ನಿರ್ಮಿಸಿದ್ದಾರೆ. ನೀರಜ್ ಚೋಪ್ರಾ, ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದು,ದೇಶದ ಕೀರ್ತಿ ಬೆಳಗಿದ್ದಾರೆ.
ಆರಂಭದಲ್ಲೇ ನೀರಜ್ ಉತ್ತಮ ಪ್ರದರ್ಶನ ನೀಡಿದ್ದರು. ಮೊದಲ ಪ್ರಯತ್ನದಲ್ಲಿ, 87.03 ಮೀಟರ್ ದೂರ ಜಾವೆಲಿನ್ ಎಸೆದಿದ್ದಾರೆ. ಎರಡನೇ ಬಾರಿ ನೀರಜ್ 87.58 ಮೀಟರ್ ದೂರ ಎಸೆದಿದ್ದಾರೆ. ಮೂರನೇ ಬಾರಿ 76.78 ಮೀಟರ್ ಜಾವೆಲಿನ್ ಎಸೆದಿದ್ದಾರೆ. ನೀರಜ್, ಜರ್ಮನಿಯ ಜೂಲಿಯನ್ ವೆಬರ್ ಮತ್ತು ಜೋಹಾನ್ಸ್ ವೆಟರ್ ರಂತಹ ದಿಗ್ಗಜರನ್ನು ಹಿಂದಿಕ್ಕಿದ್ದರು. ಜೋಹಾನ್ಸ್ ವೆಟರ್ ಮೊದಲು 85.30 ಮೀಟರ್ ದೂರ ಎಸೆದಿದ್ದರು.
ಟೋಕಿಯೊ ಒಲಿಂಪಿಕ್ಸ್ ನ 16 ನೇ ದಿನ ಭಾರತ ಅಧ್ಬುತ ಪ್ರದರ್ಶನ ನೀಡಿದೆ. ಭಾರತಕ್ಕೆ ಎರಡು ಪದಕ ಬಂದಿದೆ. ಈ ಒಲಿಂಪಿಕ್ಸ್ ನಲ್ಲಿ ಭಾರತ 7 ಪದಕಗಳನ್ನು ಗೆದ್ದಿದೆ.
ಭಾರತಕ್ಕೆ 13 ವರ್ಷಗಳ ನಂತ್ರ ಒಲಂಪಿಕ್ಸ್ ನಲ್ಲಿ ಚಿನ್ನದ ಪದಕ ಸಿಕ್ಕಿದೆ. ಇಡೀ ದೇಶವೇ ಇದನ್ನು ಸಂಭ್ರಮಿಸುತ್ತಿದೆ.