alex Certify ಟೋಕಿಯೊ ಒಲಂಪಿಕ್ಸ್: ಸೆಮಿಫೈನಲ್ ತಲುಪಿದ ಭಾರತದ ಕುಸ್ತಿಪಟುಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೋಕಿಯೊ ಒಲಂಪಿಕ್ಸ್: ಸೆಮಿಫೈನಲ್ ತಲುಪಿದ ಭಾರತದ ಕುಸ್ತಿಪಟುಗಳು

tokyo olympics 2020 wrestler deepak punia and ravi kumar dahiya advances to semi  final freestyle wrestling | Tokyo Olympics: Indian wrestlers shine in  wrestling, Ravi Dahiya and Deepak Poonia reach semi-finals -

ಟೋಕಿಯೊ ಒಲಂಪಿಕ್ಸ್ ನಲ್ಲಿ ಭಾರತದ ಕುಸ್ತಿಪಟುಗಳು ಉತ್ತಮ ಪ್ರದರ್ಶನ ನೀಡಿದ್ದಾರೆ. ರವಿ ದಹಿಯಾ ಮತ್ತು ದೀಪಕ್ ಪುನಿಯಾ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಪದಕದ ದಾರಿ ಸುಗಮಗೊಳಿಸಿದ್ದಾರೆ. ರವಿ ಹಾಗೂ ದೀಪಕ್ ಸೆಮಿಫೈನಲ್ ತಲುಪಿದ್ದಾರೆ.

ರವಿ ದಹಿಯಾ 57 ಕೆಜಿ ವಿಭಾಗದಲ್ಲಿ ಮತ್ತು ದೀಪಕ್ ಪೂನಿಯಾ 86 ಕೆಜಿ ವಿಭಾಗದಲ್ಲಿ ಸೆಮಿಫೈನಲ್ ತಲುಪಿದ್ದಾರೆ. ಟೋಕಿಯೊ ಒಲಿಂಪಿಕ್ಸ್ ಪುರುಷರ ಫ್ರೀಸ್ಟೈಲ್ 57 ಕೆಜಿ ವಿಭಾಗದಲ್ಲಿ ಭಾರತದ ಕುಸ್ತಿಪಟು ರವಿ ದಹಿಯಾ, ಬಲ್ಗೇರಿಯಾದ ಜಾರ್ಜಿ ವ್ಯಾಲೆಂಟಿನೋವ್ ವೆಂಗೆಲೋವ್ ಅವರನ್ನು ಸೋಲಿಸಿದರು. ಈ ಮೂಲಕ ಸೆಮಿಫೈನಲ್ ತಲುಪಿದ್ದಾರೆ.

ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ: ವಿಶೇಷ ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ

ಮತ್ತೊಂದೆಡೆ, ಭಾರತದ ದೀಪಕ್ ಪೂನಿಯಾ, ಚೀನಾದ ಲಿ ಜುಶೆನ್ ಅವರನ್ನು 6-3ರಿಂದ ಸೋಲಿಸಿ ಟೋಕಿಯೊ ಒಲಿಂಪಿಕ್ಸ್ ಪುರುಷರ 86 ಕೆಜಿ ಕುಸ್ತಿ ಸ್ಪರ್ಧೆಯ ಸೆಮಿಫೈನಲ್‌ಗೆ ಪ್ರವೇಶಿಸಿದರು.

ರವಿ ದಹಿಯಾ, ಸೆಮಿಫೈನಲ್ ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ 2.45 ಕ್ಕೆ ನಡೆಯಲಿದೆ. ದೀಪಕ್ ಪೂನಿಯಾ ಸೆಮಿಫೈನಲ್‌ ಮಧ್ಯಾಹ್ನ 3.06 ಕ್ಕೆ ನಡೆಯಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...