ಟೋಕಿಯೊ ಒಲಂಪಿಕ್ಸ್ ನಲ್ಲಿ 41 ವರ್ಷಗಳ ನಂತರ, ಭಾರತೀಯ ಹಾಕಿ ತಂಡ ಕಂಚಿನ ಪದಕ ಗೆದ್ದಿದೆ. ಒಲಿಂಪಿಕ್ಸ್ ನಲ್ಲಿ ಐತಿಹಾಸಿಕ ವಿಜಯ ಸಾಧಿಸಿದೆ. ಹಾಕಿಯಲ್ಲಿ ಭಾರತ 41 ವರ್ಷಗಳ ಬರವನ್ನು ಕೊನೆಗೊಳಿಸಿ ಒಲಿಂಪಿಕ್ಸ್ ಪದಕವನ್ನು ಗೆದ್ದಿದೆ.
ಟೋಕಿಯೊ ಒಲಿಂಪಿಕ್ಸ್ ನಲ್ಲಿ ಜರ್ಮನಿ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ ಭಾರತದ ಪುರುಷರ ಹಾಕಿ ತಂಡ 5-4ರಿಂದ ಗೆಲ್ಲುವ ಮೂಲಕ ಕಂಚಿನ ಪದಕ ಗೆದ್ದಿದೆ. ಭಾರತೀಯ ಹಾಕಿ ತಂಡ 1980 ರ ನಂತರ ಮೊದಲ ಬಾರಿಗೆ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದಿದೆ.
ಸೆಮಿಫೈನಲ್ ನಲ್ಲಿ ಭಾರತ ತಂಡ ಬೆಲ್ಜಿಯಂ ಎದುರು ಸೋತಿತ್ತು. ಇದರ ನಂತರ ಕಂಚಿಗಾಗಿ ಹೋರಾಟ ನಡೆಸಿತ್ತು. ಆರಂಭದಲ್ಲಿ ಭಾರತ ತಂಡವು ಜರ್ಮನಿಯ ವಿರುದ್ಧ 1-3 ರಿಂದ ಹಿಂದುಳಿದಿತ್ತು, ಆದರೆ ಏಳು ನಿಮಿಷಗಳಲ್ಲಿ ನಾಲ್ಕು ಗೋಲುಗಳನ್ನು ಗಳಿಸಿದ ಭಾರತೀಯ ಆಟಗಾರರು ಪಂದ್ಯದ ದಿಕ್ಕನ್ನು ತಿರುಗಿಸಿದರು.
ಇಡೀ ದೇಶವೇ ಈ ಗೆಲುವನ್ನು ಸಂಭ್ರಮಿಸುತ್ತಿದ್ದೆ. ದೇಶದಾದ್ಯಂತ ಹಾಕಿ ತಂಡಕ್ಕೆ ಶುಭಾಷಯಗಳು ಹರಿದು ಬರ್ತಿವೆ.