ʼಸೆಕ್ಸ್ʼ ನಿರ್ಬಂಧಿಸಲು ಆಟಗಾರರಿಗೆ ನೀಡಲಾಗಿದೆಯಾ ಈ ಮಂಚ…? ಗೊಂದಲಗಳಿಗೆ ತೆರೆ ಎಳೆದ ಒಲಂಪಿಕ್ ಸಂಘಟಕರು 19-07-2021 1:18PM IST / No Comments / Posted In: Latest News, Live News, Sports ಟೋಕಿಯೋ ಒಲಿಂಪಿಕ್ ನಡೆಯುತ್ತಿರುವ ಗ್ರಾಮದಲ್ಲಿ ಆಟಗಾರರಿಗೆ ನೀಡಲಾಗಿರುವ ಮಂಚಗಳು ಗಟ್ಟಿಮುಟ್ಟಾಗಿವೆ ಎಂದು ಒಲಿಂಪಿಕ್ ಸಂಘಟಕರು ಹೇಳಿದ್ದಾರೆ. ಐರಿಷ್ನ ಜಿಮ್ನಾಸ್ಟ್ ರೈಸ್ ಮೆಕ್ಲೆನಾಘನ್ ಟ್ವಿಟರ್ನಲ್ಲಿ ಮಂಚಗಳ ಗುಣಮಟ್ಟ ಸರಿಯಿಲ್ಲ ಎಂಬ ಆರೋಪದ ಸಂಬಂಧ ವಿಡಿಯೋವನ್ನ ಶೇರ್ ಮಾಡಿದ್ದರು. ಈ ವಿಡಿಯೋದಲ್ಲಿ ಅವರು ಮಂಚದ ಮೇಲೆ ಹಾರುವ ಮೂಲಕ ಇದು ಸೆಕ್ಸ್ ವಿರೋಧಿ ಮಂಚವಲ್ಲ ಎಂದು ಅಭಿಪ್ರಾಯಪಟ್ಟಿದ್ದರು. ನ್ಯೂಯಾರ್ಕ್ ಪೋಸ್ಟ್ನಲ್ಲಿ ಪ್ರಕಟವಾಗಿದ್ದ ವರದಿಯಲ್ಲಿ, ಒಲಿಂಪಿಕ್ ಕ್ರೀಡಾಗ್ರಾಮದಲ್ಲಿ ಸಾಮಾಜಿಕ ಅಂತರವನ್ನ ಕಾಪಾಡುವ ಸಲುವಾಗಿ ಸೆಕ್ಸ್ ವಿರೋಧಿ ಬೆಡ್ಗಳನ್ನ ನಿರ್ಮಾಣ ಮಾಡಲಾಗಿದೆ. ಕಾರ್ಡ್ ಬೋರ್ಡ್ನಿಂದ ನಿರ್ಮಾಣವಾದ ಬೆಡ್ಗಳು ಬೇಗನೆ ಮುರಿದುಹೋಗುವಂತಿವೆ ಎಂದು ಹೇಳಲಾಗಿತ್ತು. ಆದರೆ ನ್ಯೂಯಾರ್ಕ್ ಪೋಸ್ಟ್ನ ಈ ವರದಿಯಲ್ಲಿ ಟ್ವಿಟರ್ ಪೋಸ್ಟ್ ಮೂಲಕ ಪ್ರತಿಕ್ರಿಯೆ ನೀಡಿದ ಐರಿಷ್ನ ಜಿಮ್ನಾಸ್ಟ್ ರೈಸ್ ಮೆಕ್ಲೆನಾಘನ್, ಈ ಮಂಚದ ಮೇಲೆ ನಿಂತು ಹಾರುತ್ತಿರುವ ವಿಡಿಯೋ ಶೇರ್ ಮಾಡಿದ್ದಾರೆ. ಅಲ್ಲದೇ ಈ ಮಂಚಗಳು ಸೆಕ್ಸ್ ವಿರೋಧಿ ಎಂದು ವರದಿ ಪ್ರಕಟವಾಗಿದೆ. ಇದೊಂದು ಸುಳ್ಳು ಸುದ್ದಿಯಾಗಿದೆ ಎಂದು ಹೇಳಿದ್ದರು. ರೈಸ್ ಮೆಕ್ಲೆನಾಘನ್ರ ಈ ವಿಡಿಯೋವನ್ನ ಒಲಿಂಪಿಕ್ಸ್ ಅಧಿಕೃತ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಲಾಗಿದೆ. ಹಾಗೂ ಮೂಢನಂಬಿಕೆಯನ್ನ ದೂರಮಾಡಿದ್ದಕ್ಕೆ ಧನ್ಯವಾದಗಳು. ಈ ಬೆಡ್ಗಳು ನಿಜಕ್ಕೂ ಗಟ್ಟಿಮುಟ್ಟಾಗಿವೆ ಎಂದು ಶೀರ್ಷಿಕೆ ನೀಡಲಾಗಿದೆ. https://twitter.com/i/status/1416567768938291203 Thanks for debunking the myth.😂You heard it first from @TeamIreland gymnast @McClenaghanRhys – the sustainable cardboard beds are sturdy! #Tokyo2020 https://t.co/lsXbQokGVE — The Olympic Games (@Olympics) July 19, 2021