ಸದ್ಯ ಎಲ್ಲರ ಕಣ್ಣು ಟೋಕಿಯೊ ಮೇಲಿದೆ. ಟೋಕಿಯೊದಲ್ಲಿ ಒಲಂಪಿಕ್ಸ್ ಪಂದ್ಯಗಳು ನಡೆಯುತ್ತಿದ್ದು, ಕ್ರೀಡಾಭಿಮಾನಿಗಳು ಕುತೂಹಲದಿಂದ ಪಂದ್ಯ ವೀಕ್ಷಣೆ ಮಾಡ್ತಿದ್ದಾರೆ. ಆದ್ರೆ ಜಪಾನ್ ರಾಜಧಾನಿ ಟೋಕಿಯೊದಲ್ಲಿ ಕೊರೊನಾ ಭಯ ಹುಟ್ಟಿಸಿದೆ.
ಟೋಕಿಯೊದಲ್ಲಿ ದಿನ ದಿನಕ್ಕೂ ಕೊರೊನಾ ಸೋಂಕಿನ ಪ್ರಕರಣ ಹೆಚ್ಚಾಗ್ತಿದೆ. ಗುರುವಾರ ರಾಜಧಾನಿಯಲ್ಲಿ ದಾಖಲೆಯ 5042 ಹೊಸ ಪ್ರಕರಣಗಳು ದಾಖಲಾಗಿವೆ. ಇದು ನಗರದಲ್ಲಿ ಒಂದು ದಿನದ ಗರಿಷ್ಠ ಪ್ರಕರಣವಾಗಿದೆ.
ಒಲಂಪಿಕ್ಸ್ ಶುರುವಾದ್ಮೇಲೆ ಐದು ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿರುವುದು ಇದೇ ಮೊದಲು. ಟೋಕಿಯೊದಲ್ಲಿ ಸೋಂಕಿತರ ಸಂಖ್ಯೆ 2,36,138 ಕ್ಕೆ ಏರಿಕೆಯಾಗಿದೆ. ಜುಲೈ 12 ರಿಂದ ಟೋಕಿಯೊದಲ್ಲಿ ತುರ್ತು ಪರಿಸ್ಥಿತಿ ಜಾರಿಯಲ್ಲಿದೆ. ಜಪಾನ್‌ನಲ್ಲಿ ಬುಧವಾರ ಸುಮಾರು 14,000 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಜಪಾನ್‌ನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 970,000 ತಲುಪಿದೆ.