ಕೊರೊನಾ ಕಾರಣದಿಂದಾಗಿ ಒಂದು ವರ್ಷದಿಂದ ರದ್ದಾಗಿದ್ದ ಒಲಿಂಪಿಕ್ ಇದೀಗ ರಂಗೇರುತ್ತಿದೆ. ಪಂದ್ಯ ಆರಂಭಕ್ಕೆ ಇನ್ನೇನು 2 ದಿನ ಬಾಕಿ ಇರುವಾಗಲೇ ಕ್ರೀಡಾಗ್ರಾಮದಲ್ಲಿ ಕೊರೊನಾ ಪ್ರಕರಣಗಳು ಕಾಣಿಸಿಕೊಳ್ತಿರೋದು ಸಹ ಆತಂಕಕ್ಕೆ ದೂಡಿದೆ. ಕೊರೊನಾ ಪ್ರಕರಣಗಳು ಹೆಚ್ಚಾದಲ್ಲಿ ಪಂದ್ಯಾವಳಿ ರದ್ದು ಮಾಡಲಾಗುತ್ತದೆಯೇ ಎಂಬ ಪ್ರಶ್ನೆಗೆ ಟೋಕಿಯೋ ಒಲಿಂಪಿಕ್ ಮುಖ್ಯಸ್ಥರು ಪರೋಕ್ಷವಾಗಿ ಹೌದು ಎಂಬ ಉತ್ತರವನ್ನ ನೀಡಿದ್ದಾರೆ.
ಸುದ್ದಿಗೋಷ್ಠಿಯೊಂದರಲ್ಲಿ ಭಾಗಿಯಾಗಿದ್ದ ವೇಳೆ ಕೊರೊನಾ ಪ್ರಕರಣಗಳು ಹೆಚ್ಚಾದಲ್ಲಿ ಪಂದ್ಯಗಳು ರದ್ದಾಗಬಹುದೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಟೋಕಿಯೋ ಒಲಿಂಪಿಕ್ಸ್ ಮುಖ್ಯಸ್ಥ ಟೊಶಿರೋ ಮುಟೋ, ಪ್ರಕರಣಗಳ ಸಂಖ್ಯೆಯ ಮೇಲೆ ನಾವು ಕಣ್ಣಿಟ್ಟಿದ್ದೇವೆ. ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆಯೇ ಮುಂದೆ ಕೈಗೊಳ್ಳಬಹುದಾದ ಕ್ರಮದ ಮೇಲೆ ಚರ್ಚೆ ಮುಂದುವರಿಸಲಿದ್ದೇವೆ ಎಂದು ಹೇಳಿದ್ದಾರೆ.
ಕೊರೊನಾ ವೈರಸ್ ಪರಿಸ್ಥಿತಿಯನ್ನ ಆಧರಿಸಿ ನಾವು ಮತ್ತೊಮ್ಮೆ ಮಾತುಕತೆ ನಡೆಸಲಿದ್ದೇವೆ. ಕೊರೊನಾ ಪ್ರಕರಣಗಳು ಇನ್ನಷ್ಟು ಹೆಚ್ಚಾಗಬಹುದು ಇಲ್ಲವೇ ತಹಬದಿಗೆ ಬರಲೂಬಹುದು. ಹೀಗಾಗಿ ಪರಿಸ್ಥಿತಿಯನ್ನ ಆಧರಿಸಿ ಸೂಕ್ತ ಕ್ರಮ ಕೈಗೊಳ್ಳಲಿದ್ದೇವೆ ಎಂದು ಹೇಳಿದ್ದಾರೆ .