ಸಾರ್ವಜನಿಕ ಶೌಚಾಲಯ ಅಂದ್ರೆ ಮೂಗು ಮುರಿಯುವವರೇ ಜಾಸ್ತಿ. ಸಾರ್ವಜನಿಕ ಶೌಚಾಲಯ ಸಾಮಾನ್ಯವಾಗಿ ಕೊಳಕಾಗಿರುತ್ತದೆ. ಸಾರ್ವಜನಿಕ ಶೌಚಾಲಯವನ್ನು ಸುಂದರ ಕೆಫೆಯಾಗಿ ಬದಲಾಯಿಸುವ ಬಗ್ಗೆ ಯಾರು ಆಲೋಚನೆ ಮಾಡುವುದಿಲ್ಲ. ಆದ್ರೆ ಬ್ರಿಸ್ಟಲ್‌ನಲ್ಲಿ, ಸಾರ್ವಜನಿಕ ಶೌಚಾಲಯವನ್ನು ನವೀಕರಿಸಿ ಕೆಫೆ ಮಾಡಲಾಗಿದೆ.
ಐತಿಹಾಸಿಕ ವಾಸ್ತುಶಿಲ್ಪವಿರುವ ಈ ಕಟ್ಟಡಕ್ಕೆ ಆಧುನಿಕ ಟಚ್ ನೀಡಲಾಗಿದೆ. ಇದು ವಿಕ್ಟೋರಿಯನ್ ರೆಸ್ಟ್ ರೂಂನಂತೆ ಕಂಡರೂ ಕ್ಲಾಕ್‌ರೂಮ್ ಕೆಫೆಯು ಹೆಚ್ಚು ಜನಪ್ರಿಯತೆಯನ್ನು ಪಡೆದಿದೆ. ಅನೇಕರು ಇಲ್ಲಿಗೆ ಬರ್ತಾರೆ.
ಶೌಚಾಲಯವನ್ನು 1904 ರಲ್ಲಿ ನಿರ್ಮಿಸಲಾಗಿದೆ. 2017 ರಲ್ಲಿ ಇದನ್ನು ಹರಾಜು ಮಾಡಲಾಯ್ತು. ಆಲ್ಫ್ರೆಡ್ ಫಿಟ್ಜ್ ಜೆರಾಲ್ಡ್ ಈ ಕಟ್ಟಡವನ್ನು 2 ಕೋಟಿಗಿಂತ ಹೆಚ್ಚು ಬೆಲೆಗೆ ಖರೀದಿಸಿದರು. 38 ವರ್ಷದ ಆಲ್ಫ್ರೆಡ್, ಕೆಫೆ ಮಾಡಲು ಮೊದಲು ಬಯಸಿರಲಿಲ್ಲವಂತೆ. ಕಟ್ಟಡದ ಮೇಲೆ ಪ್ರೀತಿ ಹುಟ್ಟಿ ಅದನ್ನು ಖರೀದಿಸಿದ್ದರಂತೆ. ನಂತ್ರ ಇದನ್ನು ಕೆಫೆಯಾಗಿ ಪರಿವರ್ತಿಸಿದ್ರಂತೆ.
ಕೆಫೆ ನೋಡಲು ಸುಂದರವಾಗಿದ್ದು, ಅನೇಕ ಗ್ರಾಹಕರು ಪ್ರತಿ ದಿನ ಇಲ್ಲಿಗೆ ಬರ್ತಾರೆ. ಕಟ್ಟಡದ ಒಳಗೆ ಬಿಳಿ ಟೈಲ್ಸ್ ಹಾಕಲಾಗಿದೆ.