ಬಯಲು ಮಲ ವಿಸರ್ಜನೆಯನ್ನು ನಿಷೇಧಿಸಲಾಗಿದೆ. ಆದ್ರೆ ದೇಶದ ಅನೇಕ ಕಡೆ ಇನ್ನೂ ಬಯಲು ಮಲ ವಿಸರ್ಜನೆ ಜಾರಿಯಲ್ಲಿದೆ. ಕೆಲವರು ಮನೆಯಲ್ಲಿ ಶೌಚಾಲಯವಿದ್ರೂ ಬಯಲು ಮಲ ವಿಸರ್ಜನೆಯನ್ನು ಇಷ್ಟಪಡ್ತಿದ್ದಾರೆ. ಮಧ್ಯಪ್ರದೇಶದ ಫಂಡಾ ಕಲಾನ್ ಗ್ರಾಮ ಕೂಡ ಇದ್ರಿಂದ ಹೊರತಾಗಿಲ್ಲ.
ಅನೇಕ ಮನೆಗಳಲ್ಲಿ ಶೌಚಾಲಯವಿದ್ರೂ ಜನರು ಬಯಲ ಮಲ ವಿಸರ್ಜನೆ ಮಾಡ್ತಿದ್ದಾರೆ. ಇದ್ರ ಬಗ್ಗೆ ಜನರಿಗೆ ಮನವರಿಕೆ ಮಾಡಲು ಸ್ಥಳೀಯ ಆಡಳಿತ ಭಿನ್ನ ಆಟವನ್ನು ಏರ್ಪಡಿಸಿದೆ. 50-55 ವರ್ಷದ ಕೆಲ ಮಹಿಳೆಯರನ್ನು ಸ್ಪರ್ಧೆಗೆ ಆಯ್ಕೆ ಮಾಡಿದೆ. ಭಾನುವಾರ ಟ್ರಯಲ್ ಕೂಡ ನಡೆದಿದೆ.
ಇಂದು ಸಂಜೆ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಮಹಿಳೆಯರು ಕೈನಲ್ಲಿ ಚಂಬು ಹಿಡಿದು ನಿಲ್ಲಬೇಕು. ಮೊದಲು ಗುರಿ ಮುಟ್ಟುವ ಮಹಿಳೆಗೆ ಆಕೆ ಸೊಸೆ ಮೆಡಲ್ ನೀಡುತ್ತಾಳೆ. ಗುರಿ ಮುಟ್ಟುವ ಜಾಗದಲ್ಲಿ ಶೌಚಾಲಯ ನಿರ್ಮಿಸಲಾಗಿದೆ. ಶೌಚಾಲಯಕ್ಕೆ ಮೊದಲು ತಲುಪುವ ಮಹಿಳೆ ಚೆಂಬಿನಲ್ಲಿರುವ ನೀರು ಚೆಲ್ಲದಂತೆ ಗಮನ ಹರಿಸಬೇಕು. ಶೌಚಾಲಯದ ಬಳಿ ಬಂದ್ಮೇಲೆ ನೀರನ್ನು ಚೆಲ್ಲಬೇಕು. ಯಾರು ಮೊದಲು ಬರುತ್ತಾರೋ ಅವರಿಗೆ ಪ್ರಶಸ್ತಿ ನೀಡಲಾಗುವುದು.