ಕಲಬುರಗಿ: ಇಳಿಕೆ ಹಾದಿಯಲ್ಲಿದ್ದ ತೊಗರಿ ದರ ಸಂಕ್ರಾಂತಿ ನಂತರ ಏರಿಕೆ ಕಾಣತೊಡಗಿದೆ. ಕಳೆದ ವರ್ಷ ಕಠಾವಿನ ನಂತರ 9ರಿಂದ 10 ಸಾವಿರ ರೂ.ವರೆಗೂ ಇದ್ದ ಕ್ವಿಂಟಲ್ ತೊಗರಿ ದರ 2023ರ ಆಗಸ್ಟ್ ನಲ್ಲಿ 12,200 ರೂ.ನಿಂದ 12,500 ರೂ.ವರೆಗೆ ಮಾರಾಟವಾಗಿತ್ತು.
ನಂತರ ಇಳಿಕೆ ಕಂಡು ಸಂಕ್ರಾಂತಿ ಹಬ್ಬಕ್ಕೆ ಮೊದಲು 8500 ರಿಂದ 8,800 ರೂ.ವರೆಗೆ ಬೆಲೆ ಸ್ಥಿರವಾಗಿತ್ತು. ಸಂಕ್ರಾಂತಿಯ ನಂತರ ತೊಗರಿ ದರ ಏರಿಕೆ ಹಾದಿಯಲ್ಲಿದೆ. ಜನವರಿ 19ರಂದು ಕಲಬುರಗಿ ಎಪಿಎಂಸಿಯಲ್ಲಿ 10,323 ರೂ.ಗೆ ಮಾರಾಟವಾಗಿದ್ದು, ಇದು ಈ ವರ್ಷದ ಗರಿಷ್ಠ ದರವಾಗಿದೆ.
ಜನವರಿ 19ರಂದು 10,323 ರೂ., ಜನವರಿ 20ರಂದು 10,250ರೂ. ಗೆ ತೊಗರಿ ಮಾರಾಟವಾಗಿದೆ. ಸರ್ಕಾರದಿಂದ ಖರೀದಿ ಆದೇಶ ಹೊರ ಬಿದ್ದ ನಂತರ ದರ ಚೇತರಿಕೆ ಕಂಡಿದೆ. ಇದರಿಂದ ರೈತರ ಸಮಾಧಾನ ತಂದಿದೆ. ಮಾರುಕಟ್ಟೆಗೆ ತೊಗರಿ ಆವಕ ಹೆಚ್ಚಳವಾಗಿದ್ದು, ದರ ಇದೇ ರೀತಿ ಮುಂದುವರೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.