ನ್ಯೂಯಾರ್ಕ್ ನಗರದಲ್ಲಿ ವಾಸಿಸುತ್ತಿರುವ ಮಹಿಳೆಯೊಬ್ಬರು ತಮ್ಮ ಮಗುವನ್ನ ಭಾರತೀಯ ರೆಸ್ಟೋರೆಂಟ್ ಗೆ ಕರೆದೊಯ್ದಿದ್ದು ಮಗು ಇಂಡಿಯನ್ ಫುಡ್ ಎಂಜಾಯ್ ಮಾಡಿದೆ.
ಈ ವಿಡಿಯೋವನ್ನ ತಾಯಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ವೈರಲ್ ಆಗಿದೆ. ಪುಟ್ಟ ಮಗಳು ಮೊದಲ ಬಾರಿಗೆ ಭಾರತೀಯ ಆಹಾರವನ್ನು ಎಂಜಾಯ್ ಮಾಡಿದ್ದಾಳೆ. ಪಾನಿಪುರಿಯಿಂದ ದಾಲ್ ತಡ್ಕಾದವರೆಗೆ ಎಲ್ಲಾ ಖಾದ್ಯಗಳನ್ನು ತುಂಬಾ ಇಷ್ಟಪಟ್ಟು ತಿಂದಿದ್ದಾಳೆಂದು ವಿಡಿಯೋದಲ್ಲಿ ವಿವರಿಸಿದ್ದಾರೆ.
ಸೋಫಿಯಾ ಎಂಬ ಪುಟ್ಟ ಮಗು ಪಾಪಡ್ ( ಹಪ್ಪಳ) ತಿನ್ನಲು ಪ್ರಾರಂಭಿಸುತ್ತದೆ. ಪಾನಿಪುರಿ, ಅನ್ನ ಮತ್ತು ನಾನ್‌ನೊಂದಿಗೆ ಸ್ವಲ್ಪ ದಾಲ್ ತಡ್ಕಾವನ್ನು ತಿನ್ನಲು ಮಗು ಮಂದಾಗುತ್ತದೆ. ಇಂಡಿಯನ್ ಫುಡ್ ಅನ್ನು ಮಗು ತುಂಬಾ ಎಂಜಾಯ್ ಮಾಡಿದೆ ಎಂದು ತಾಯಿ ಹೇಳಿದ್ದಾರೆ.
ಏಂಜೆಲ್ ಇಂಡಿಯನ್ ರೆಸ್ಟೋರೆಂಟ್‌ನಲ್ಲಿ ನಮ್ಮ ಭೋಜನದ ಮೊದಲ ಭಾಗ ಎಂದು ತಾಯಿ ವಿಡಿಯೋದಲ್ಲಿ ಹೇಳಿದ್ದಾರೆ. ಪ್ರತಿ ಆಹಾರವನ್ನು ಆಸ್ವಾದಿಸುತ್ತಾ ತಿನ್ನುವ ಮಗುವಿನ ಮುದ್ದುತನ ನೆಟ್ಟಿಗರಿಗೆ ಇಷ್ಟವಾಗಿದೆ ಏಂಜೆಲ್ ಇಂಡಿಯನ್ ರೆಸ್ಟೋರೆಂಟ್‌ನಲ್ಲಿ ಏಂಜೆಲ್ ಎಂದು ಭಾರತೀಯ ರೆಸ್ಟೋರೆಂಟ್ ವಿಡಿಯೋಗೆ ಪ್ರತಿಕ್ರಿಯಿಸಿದೆ.