ಆಸ್ಪತ್ರೆ ಎಂದರೆ ಸಾಕು ಮಕ್ಕಳು ಮಾತ್ರವಲ್ಲ ಅನೇಕ ಮಂದಿ ದೊಡ್ಡವರಿಗೂ ಕೂಡ ಮನದಲ್ಲಿ ಅಳುಕು ಶುರುವಾಗುತ್ತದೆ. ಅಲ್ಲಿನ ಫಿನಾಯಿಲ್ ವಾಸನೆ, ಔಷಧಗಳ ವಾಸನೆ, ನರ್ಸ್‌ಗಳ ಸಮವಸ್ತ್ರ, ಆಪರೇಷನ್ ಕೊಠಡಿಗಳು, ವೈದ್ಯರು ಏನು ಹೇಳುತ್ತಾರೋ ಎಂಬ ಆತಂಕದಿಂದ ಅನೇಕರ ರಕ್ತದೊತ್ತಡ ಏರುಪೇರು ಆಗಿಬಿಡುತ್ತದೆ.
SSLC ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಇಂದು ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ -ಇಲ್ಲಿದೆ ವೆಬ್ ಸೈಟ್ ಮಾಹಿತಿ
ಆದರೆ, ಬ್ರೆಜಿಲ್‌ನ ಈ ಪುಟ್ಟ ಬಾಲಕನಿಗೆ ತಾನು ಆಸ್ಪತ್ರೆಯಲ್ಲಿ ದಾಖಲಾಗಿದ್ದರೂ ಟಿವಿ ನೋಡಿಕೊಂಡು ಹಾಡು ಹಾಡುವ ಖಯಾಲಿ ಮರೆಯಾಗಿಲ್ಲ.
ಯಾವುದೇ ಅಳುಕು ಇಲ್ಲದೆಯೇ, ತಾನೊಂದು ‘ಮ್ಯೂಸಿಕ್ ಕಾರ್ಯಕ್ರಮ ಅಥವಾ ಸ್ಟುಡಿಯೊದಲ್ಲಿ ಇದ್ದೇನೆʼ ಎಂಬಂತೆ ಮನಬಿಚ್ಚಿ ಹಾಡನ್ನು ಹಾಡುತ್ತಿದ್ದಾನೆ ಈ ಪುಟ್ಟ ಬಾಲಕ ಮಿಗುಯೆಲ್.
ಜಠರದ ಕರುಳಿನ ಉರಿಯೂತ ಸಮಸ್ಯೆಯಿಂದ ಬಳಲುತ್ತಿದ್ದ ಮಿಗುಯೆಲ್‌ಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಸ್ವಲ್ಪ ಚೇತರಿಸಿಕೊಂಡ ಕೂಡಲೇ ಹಾಸಿಗೆಯ ಎದುರಿನ ಟಿವಿಯಲ್ಲಿ ತನ್ನ ನೆಚ್ಚಿನ ಗಾಯಕನ ಹಾಡು ಪ್ರಸಾರವಾಗುತ್ತಿರುವುದನ್ನು ಮಿಗುಯೆಲ್ ಗಮನಿಸಿದ. ಕೂಡಲೇ ಕೈಯನ್ನೇ ಮೈಕ್ ರೀತಿ ಮಡಚಿಕೊಂಡು ಮುದ್ದಾಗಿ ಹಾಡಲು ಶುರು ಮಾಡಿದ್ದಾನೆ.
ಇಲ್ಲಿದೆ ಕೋಕಂ ಜ್ಯೂಸಿನ ಆರೋಗ್ಯಕರ ಪ್ರಯೋಜನ
ಈತನ ಸಂತಸದ ಕ್ಷ ಣಗಳ ವಿಡಿಯೊವನ್ನು ಟ್ವಿಟರ್‌ನಲ್ಲಿ ಹಾಡುಗಾರ ಪೆರಿಕಲ್ಸ್ ಫಾರಿಯಾ ಅವರು ಹಂಚಿಕೊಂಡಿದ್ದಾರೆ. ’ ಗುಡ್ ಮಾರ್ನಿಂಗ್, ನನ್ನ ಖಾತೆಯಲ್ಲಿ ಪುಟ್ಟ ದೇವತೆಯೊಂದರ ವಿಡಿಯೊ ಪೋಸ್ಟ್ ಮಾಡಿದ್ದೇನೆ. ಕಣ್ಣಾಡಿಸಿರಿ,’ ಎಂದಿದ್ದಾರೆ.
ಮಗುವನ್ನು ತಬ್ಬಿಕೊಂಡು ಜತೆಯಲ್ಲೇ ಹಾಡಬೇಕು ಎನಿಸುತ್ತಿದೆ ಎಂದು ಟ್ವೀಟಿಗರು ಸಂತೋಷದಿಂದ ಪ್ರತಿಕ್ರಿಯಿಸಿದ್ದಾರೆ.