
ಇದೀಗ ಪುಟಾಣಿ ಬೆಕ್ಕಿನ ಮರಿಯೊಂದು ಚಿಕ್ಕ ಪುಟಾಣಿಯ ಜೊತೆ ಆಟ ಆಡುವ ಕ್ಯೂಟ್ ವಿಡಿಯೋ ವೈರಲ್ ಆಗಿದೆ. ಟ್ವಿಟ್ಟರ್‌ನಲ್ಲಿ ಬ್ಯುಟೆಂಗೆಬೀಡೆನ್ ಹಂಚಿಕೊಂಡಿರುವ ವೀಡಿಯೊ ನೋಡಿದರೆ ಎಂಥ ನೋವು ಕೂಡ ಮಾಯವಾಗುತ್ತದೆ.
ಈ ವಿಡಿಯೋದಲ್ಲಿ ಮೆಟ್ಟಿಲುಗಳ ಮೇಲೆ ಬೆಕ್ಕು ಆರಾಮವಾಗಿ ಕುಳಿತಿದೆ. ಪುಟಾಣಿ ಮಗು ಕರ್ಚೀಫ್ ಒಂದನ್ನು ಮೇಲಕ್ಕೆ ಎಸೆದಾಗ ಬೆಕ್ಕು ಅದನ್ನು ಹಿಡಿದುಕೊಂಡು ಕೆಳಕ್ಕೆ ಬಿಡುತ್ತದೆ. ಹೀಗೆ ಮಗು ಮತ್ತು ಬೆಕ್ಕು ಆಟವಾಡುವುದನ್ನು ನೋಡಬಹುದು. ಮನಸ್ಸಿಗೆ ಬೇಸರವಾದಾಗ ಖಂಡಿತವಾಗಿಯೂ ಇಂಥ ವಿಡಿಯೋ ನಮ್ಮ ಮನಸ್ಸನ್ನು ಆಹ್ಲಾದಗೊಳಿಸುತ್ತದೆ ಎಂದು ಹಲವರು ಕಮೆಂಟ್ ಮೂಲಕ ತಿಳಿಸಿದ್ದಾರೆ.