ವಿಮಾನ ನಿಲ್ದಾಣಗಳಲ್ಲಿ ಬಂಧುಗಳನ್ನು ಬೀಳ್ಕೊಡುವುದು ಬಹಳ ಭಾವುಕವಾದ ಸಂದರ್ಭ. ಇದೀಗ, ಪುಟಾಣಿಯೊಬ್ಬಳು ತನ್ನ ಸಂಬಂಧಿಕರಿಗೆ ಗುಡ್‌ಬೈ ಹೇಳುತ್ತಿರುವ ದೃಶ್ಯವೊಂದು ನೆಟ್ಟಿಗರ ಹೃದಯ ಕರಗಿಸಿದೆ.
ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಹೊರತುಪಡಿಸಿದ ಮಂದಿಗೆ ಪ್ರವೇಶವಿಲ್ಲದ ಜಾಗಕ್ಕೆ ತೆರಳಿ ತನ್ನ ಬಂಧುಗಳಿಗೆ ಟಾಟಾ ಮಾಡಲು ಈ ಪುಟ್ಟಿ ಭದ್ರತಾ ಸಿಬ್ಬಂದಿಯೊಬ್ಬರಲ್ಲಿ ಅನುಮತಿ ಕೋರುತ್ತಿರುವ ವಿಡಿಯೋ ವೈರಲ್ ಆಗಿದೆ. ಮಗು ಕೇಳಿದ ರೀತಿಗೆ ಕರಗಿ ಹೋದ ಭದ್ರತಾ ಸಿಬ್ಬಂದಿ ಆಕೆಯನ್ನು ಅಲ್ಲಿಗೆ ಹೋಗಲು ಅನುಮತಿ ನೀಡಿದ್ದಾರೆ.
GOOD NEWS: ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಕುಸಿತ; 24 ಗಂಟೆಯಲ್ಲಿ 19,788 ಜನರು ಡಿಸ್ಚಾರ್ಜ್; ದೇಶದಲ್ಲಿ ಪತ್ತೆಯಾದ ಹೊಸ ಕೋವಿಡ್ ಕೇಸ್ ಎಷ್ಟು….?
ಮಹಿಳೆಯೊಬ್ಬರನ್ನು ಗ್ರೀಟ್ ಮಾಡಿ ಕಳಿಸಲು ಹೋದ ಈ ಮಗುವನ್ನು ಆ ಮಹಿಳೆ ಹಾಗೇ ಓಡಿ ಬಂದು ಅಪ್ಪಿ ಕಳುಹಿಸಿದ್ದಾರೆ. ಅಧಿಕಾರಿಗಳು ಒಂದಷ್ಟು ದೂರದಿಂದ ಗಮನಿಸುತ್ತಿರುವಂತೆಯೇ ಈ ಸುಂದರ ಘಟನೆ ನಡೆದಿದೆ.
17 ಸೆಕೆಂಡ್‌ಗಳ ಈ ಕ್ಲಿಪ್ ನೆಟ್ಟಿಗರಲ್ಲಿ ಭಾರೀ ಹಿಟ್ ಆಗಿದೆ.
https://www.youtube.com/watch?v=tb1Li92TZBQ