ಫ್ರಿಡ್ಜ್ ಬಾಗಿಲು ಏಕೆ ತೆರೆದೆ ಎಂದು ಕೇಳಿದ ತಾಯಿಗೆ ತನ್ನದೇ ಮುದ್ದು ಮುದ್ದು ಭಾಷೆಯಲ್ಲಿ ಪ್ರತಿಕ್ರಿಯಿಸುತ್ತಿರುವ ಮಗುವೊಂದರ ವಿಡಿಯೋವೊಂದು ಇನ್‌ಸ್ಟಾಗ್ರಾಂನಲ್ಲಿ ಭಾರೀ ಸದ್ದು ಮಾಡುತ್ತಿದೆ.
ತೆರೆದ ಫ್ರಿಡ್ಜ್ ಎದುರು ಮಗು ಇರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. “ನನ್ನ ಫ್ರಿಡ್ಜ್ ತೆರೆಯುತ್ತಿರುವೆ ಏಕೆ?” ಎಂದು ತಾಯಿ ಕೇಳಿದ ಪ್ರಶ್ನೆಗೆ ಮಗು ತನ್ನದೇ ಮುದ್ದು ಮುದ್ದಾದ ಧಾಟಿಯಲ್ಲಿ ಅಮ್ಮನ ಮೇಲೆ ಜೋರು ಮಾಡುತ್ತಾ ಹೇಳುತ್ತಿರುವ ಈ ವಿಡಿಯೋಗೆ ಅದಾಗಲೇ 1.9 ದಶಲಕ್ಷ ವೀಕ್ಷಣೆಗಳು ಸಂದಾಯವಾಗಿವೆ.
ಈ ವಿಡಿಯೋ ನೋಡಿದ ನೆಟ್ಟಿಗರೊಬ್ಬರು, “ಸುಮ್ಮನೇ ಬಾಯಿ ಮುಚ್ಚಿಕೊಂಡು ನನಗೆ ಏನು ಬೇಕೋ ಅದನ್ನು ತೆಗೆದುಕೊಳ್ಳಲು ಬಿಡು,” ಎಂದು ಆಕೆ ಹೇಳುತ್ತಿದ್ದಾಳೆ ಎಂದು ಮಗುವಿನ ಭಾಷೆಯನ್ನು ತಮ್ಮದೇ ಧಾಟಿಯಲ್ಲಿ ವ್ಯಾಖ್ಯಾನಿಸಿ ಕಾಮೆಂಟ್ ಮಾಡಿದ್ದಾರೆ.
https://youtu.be/BZzzM7iJgOE