ವಿಮಾನದಲ್ಲಿ ಬಾಲಕಿ ಮಾಡಿದ ಕಿಲಾಡಿ ಕೆಲಸಕ್ಕೆ ಅಪ್ಪ-ಅಮ್ಮ ಸುಸ್ತು: ವಿಡಿಯೋ ವೈರಲ್ 28-11-2022 7:09AM IST / No Comments / Posted In: Featured News, Live News, International ಚಿಕ್ಕ ಮಕ್ಕಳೊಂದಿಗೆ ಪ್ರವಾಸ ಹೋಗುವುದು ಎಂದರೆ ಪ್ರಯಾಸದ ಕೆಲಸವೇ. ಅದರಲ್ಲಿಯೂ ವಿಮಾನದಲ್ಲಿ ಇವರ ಜತೆ ಪ್ರಯಾಣಿಸುವುದು ಎಂದರೆ ಅದು ಬಲು ಕಷ್ಟ. ಹಲವು ತುಂಟ ಮಕ್ಕಳನ್ನು ಸಂಭಾಳಿಸುವುದೇ ಬಲು ಕಷ್ಟ. ದೂರದ ಪ್ರಯಾಣವಾಗಿದ್ದರೆ ವಿಮಾನಗಳಲ್ಲಿ ಮಕ್ಕಳು ಕಿರಿಕಿರಿ ಮಾಡುತ್ತಾರೆ, ಅದು ಹಲವರಿಗೆ ಹಿಂಸೆಯೂ ಆಗುತ್ತದೆ. ಅಂಥದ್ದೇ ಒಂದು ಕಿಲಾಡಿ ಬಾಲಕಿಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎಂಟು ವರ್ಷದ ಕಿಲಾಡಿ ಬಾಲಕಿಯೊಬ್ಬಳು ಅಪ್ಪ-ಅಮ್ಮನಿಗೆ ತೊಂದರೆ ಕೊಡುತ್ತಾಳೆ ಎಂದು ಅವಳು ಹೇಳಿದಂತೆ ಆಕೆಗೆ ವಿಮಾನದಲ್ಲಿ ಓಡಾಡಲು ಅವಕಾಶ ಮಾಡಿಕೊಟ್ಟಿದ್ದರು ಅವರು. ಆದರೆ ಆಕೆ ಮಾಡಿದ ಕಿಲಾಡಿ ಹಲವರಿಗೆ ಕೋಪವನ್ನೂ ತರಿಸಿದ್ದು, ಹಲವರು ಪಾಲಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಮಧ್ಯೆ ಅಪ್ಪ-ಅಮ್ಮ ಮಗಳನ್ನು ನಿಯಂತ್ರಿಸಲು ಪ್ರಯತ್ನಿಸಿದರೂ ಸಫಲವಾಗಲಿಲ್ಲ. ಅಮೆರಿಕದ ವಿಮಾನವೊಂದರಲ್ಲಿ ನಡೆದಿರುವ ಈ ಘಟನೆಯನ್ನು ರೆಡ್ಡಿಟ್ನಲ್ಲಿ ಶೇರ್ ಮಾಡಲಾಗಿದೆ. ಯಾವ ವಿಮಾನಯಾನ ಸಂಸ್ಥೆ ಅಥವಾ ಯಾವ ವಿಮಾನದಲ್ಲಿ ಘಟನೆ ಸಂಭವಿಸಿದೆ ಎಂಬುದು ಈ ವಿಡಿಯೋದಲ್ಲಿ ದೃಢಪಟ್ಟಿಲ್ಲವಾದರೂ, ಬಾಲಕಿಯ ಕಿಲಾಡಿಯನ್ನು ವಿಡಿಯೋದಲ್ಲಿ ನೋಡಬಹುದು. “8 ಗಂಟೆಗಳ ಹಾರಾಟದ ಸಮಯದಲ್ಲಿ ಮಕ್ಕಳನ್ನು ಕಾಡಲು ಬಿಡುವುದು” ಎಂಬ ಶೀರ್ಷಿಕೆ ನೀಡಲಾಗಿದ್ದು, ಇದರಲ್ಲಿ ಬಾಲಕಿ ಏನೆಲ್ಲಾ ಮಾಡುತ್ತಿದ್ದಾಳೆ ಎನ್ನುವುದನ್ನು ನೋಡಿ. Letting children run wild during an 8 hour flight byu/readysetgorilla inPublicFreakout