ಪುಟಾಣಿ ಮಕ್ಕಳಿಂದ ಮೊಬೈಲ್, ಐಪ್ಯಾಡ್, ಟ್ಯಾಬ್ಲೆಟ್ ನಂತಹ ಎಲೆಕ್ಟ್ರಾನಿಕ್ ಸಾಧನಗಳನ್ನ ದೂರ ಇಡಬೇಕು ಎಂದು ಹೇಳುವುದು ಆ ಉಪಕರಣಗಳು ಹಾಳಾಗದಿರಲಿ ಹಾಗೂ ಮಕ್ಕಳು ಸುರಕ್ಷಿತವಾಗಿರಲಿ ಎಂದು. ಅದಷ್ಟೇ ಅಲ್ಲಾ ಕೆಲವೊಂದು ಬಾರಿ ಮೊಬೈಲ್ ಬಳಸುವ ಪುಟ್ಟ ಪುಟಾಣಿಗಳು ದೊಡ್ಡ ಸಮಸ್ಯೆಯನ್ನೆ ತಂದೊಡ್ಡುತ್ತವೆ. ಅಂತದ್ದೆ ಘಟನೆ ನ್ಯೂಜೆರ್ಸಿಯಲ್ಲಿ ನಡೆದಿದೆ. 22 ತಿಂಗಳ ಪುಟ್ಟಮಗು ಆಯಾಂಶ್ ಕುಮಾರ್, ತನ್ನ ತಾಯಿಯ ಫೋನ್ ನಿಂದ 1.4 ಲಕ್ಷದ ಫರ್ನಿಚರ್ ಆರ್ಡರ್ ಮಾಡಿದ್ದಾನೆ.
ಆಗಿದ್ದು ಇಷ್ಟೇ, ಆಯಾಂಶ್ ತಾಯಿ ಮಧು ತನ್ನ ಫೋನ್ ನಲ್ಲಿರುವ ವಾಲ್ ಮಾರ್ಟ್ ಅಕೌಂಟ್ ನಲ್ಲಿ ತಮಗೆ ಇಷ್ಟವಾದ ವಸ್ತುಗಳನ್ನ ಕಾರ್ಟ್ ನಲ್ಲಿರಿಸಿದ್ದರು. ಮಧು ಅವರ ಫೋನ್ಗೆ ಪಾಸ್ ವರ್ಡ್ ಅಥವಾ ಫೇಸ್ ಲಾಕ್ ಇಲ್ಲ. ಫೋನ್ ತೆಗೆದುಕೊಂಡ ಆಯಾಂಷ್ ಮೊಬೈಲ್ನಲ್ಲಿ ಆಟವಾಡುತ್ತಾ ಆಕಸ್ಮಿಕವಾಗಿ ಕಾರ್ಟ್ ನಲ್ಲಿದ್ದ ಎಲ್ಲಾ ವಸ್ತುಗಳನ್ನ ಆರ್ಡರ್ ಮಾಡಿದ್ದಾನೆ.
ಆಯಾಂಶ್ ಆರ್ಡರ್ ಮಾಡಿದ ವಸ್ತುಗಳು ಮನೆಗೆ ತಲುಪಲು ಶುರುವಾದ್ಮೇಲೆ ಆತನ ಪೋಷಕರಿಗೆ ನಾವ್ಯಾರು ಇವನ್ನ ಆರ್ಡರ್ ಮಾಡಿಲ್ವಲ್ಲ ಅನ್ನೋ ಗೊಂದಲ ಶುರುವಾಗಿದೆ. ಫರ್ನೀಚರ್, ಚೇರ್, ಫ್ಲವರ್ ಸ್ಟ್ಯಾಂಡ್ ಸೇರಿದಂತೆ ಸಾಕಷ್ಟು ವಸ್ತುಗಳು ಡೆಲಿವರ್ ಆಗೋಕೆ ಶುರುವಾದ್ಮೇಲೆ ಆಯಾಂಶ್ ತಾಯಿ ಮಧು ತನ್ನ ವಾಲ್ಮಾರ್ಟ್ ಅಕೌಂಟ್ ಚೆಕ್ ಮಾಡಿದ್ದಾರೆ ಆಗ ಈ ಕೆಲಸ ತನ್ನ ಪುಟಾಣಿ ಮಗನದ್ದು ಎಂದು ತಿಳಿದು ಬಂದಿದೆ.
22 ತಿಂಗಳ, ಆಯಾಂಶ್ ಮೊಬೈಲನ್ನು ಇಷ್ಟೆಲ್ಲಾ ಬ್ರೌಸ್ ಮಾಡಿದ್ದಾನೆ ಎಂದು ತಿಳಿದ್ಮೇಲೆ ನಮಗೆ ಆಶ್ಚರ್ಯವಾಯಿತು ಎಂದು ಮಧು ಹಾಗೂ ಆತನ ತಂದೆ ಪ್ರಮೋದ್ ಹೇಳಿದ್ದಾರೆ. ಅಷ್ಟೇ ಅಲ್ಲಾ ಇನ್ಮುಂದೆ ತಮ್ಮ ಮೊಬೈಲ್ ಗಳಿಗೆ ಲಾಕ್, ಪಾಸ್ ವರ್ಡ್ ಹಾಗೂ ಫೇಸ್ ಲಾಕ್ ಇಡುತ್ತೀವಿ ಎಂದು ಪ್ರಮೋದ್ ಹೇಳಿದ್ದಾರೆ.