ಅಂತೋನಿ ಏಲ್ಫಾಲಕ್ ಎಂಬ ಮೂರು ವರ್ಷದ ಬಾಲಕ ಕಾಡಿನಲ್ಲಿ ಒಬ್ಬನೇ ಮೂರು ರಾತ್ರಿ ಆಶ್ಚರ್ಯ ರೀತಿಯಲ್ಲಿ ಕಳೆದಿದ್ದಾನೆ.
ಇದೀಗ ಈತನನ್ನು ರಕ್ಷಿಸುವಲ್ಲಿ ಆಸ್ಟ್ರೇಲಿಯಾದ ಪೊಲೀಸ್ ಯಶಸ್ವಿಯಾಗಿದ್ದಾರೆ.
ಸಿಡ್ನಿಯಿಂದ ಸುಮಾರು 140 ಕಿ.ಮೀ. ದೂರದಲ್ಲಿ ಈತನ ಮನೆಯಿದ್ದು, ಸೆಪ್ಟೆಂಬರ್ 4 ರಂದು ಬಾಲಕನನ್ನುತುರ್ತು ಸೇವೆ ಸಿಬ್ಬಂದಿ ಹುಡುಕಲು ಪ್ರಾರಂಭಿಸಿದರು. ಈತ ಆಟಿಸಂಯಿಂದ ಬಳಲುತ್ತಿದ್ದಾನೆ.
ಹುಡುಕುವ ಸಂದರ್ಭದಲ್ಲಿ ಸಿಬ್ಬಂದಿಗೂ ನಂಬಿಕೆ ಇರಲಿಲ್ಲ. ಆದರೆ ಆಶ್ಚರ್ಯ ರೀತಿಯಲ್ಲಿ , ಕಾಡಿನ ಮಧ್ಯೆ ನೀರನ್ನು ಕುಡಿಯುತಿದ್ದಾಗ ಹೆಲಿಕಾಪ್ಟರ್ ಮೂಲಕ ಕಾಣಿಸಿಕೊಂಡಿದ್ದಾನೆ.
ವಿವಾಹಿತ ಪುರುಷರಿಗೆ ನೆರವಾಗಲಿದೆ ಒಣದ್ರಾಕ್ಷಿ
ಅಲ್ಲಲ್ಲಿ ಕೆಲವು ಕಡೆ, ಮೈ ಕೈ ತರಚಿದ್ದು, ಮೂರು ದಿನದ ಬಳಿಕ ಸಿಕ್ಕ ಅಂತೋನಿ ಆರೋಗ್ಯವಾಗಿ ಇದ್ದಾನೆ. ಇವನು ನೀರು ಕುಡಿಯುತ್ತಿದ್ದ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಪೊಲೀಸರು ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಈತನ ತಂದೆ, ತನ್ನ ಮಗ ಸಿಕ್ಕಿದ್ದು ಪವಾಡ ಎಂದೇ ಹೇಳಿದ್ದಾರೆ. ಸದ್ಯಕ್ಕೆ ವಿಶ್ರಮಿಸುತ್ತಿದ್ದಾನೆ. ಕಣ್ಣು ಮುಚ್ಚಿಕೊಂಡೆ ಇದ್ದ ಇವನು, ತಾಯಿ ಧ್ವನಿ ಕೇಳಿದ ಕೂಡಲೇ ಕಣ್ಣು ಬಿಟ್ಟು ಹಾಗೆ ನಿದ್ರಿಸಿದ್ದಾನೆ ಎಂದು ಅಂತೋನಿ ತಂದೆ ತಿಳಿಸಿದ್ದಾರೆ.
ಅಂತೋನಿ ಸಿಕ್ಕಿದ ಜಾಗದಲ್ಲಿ, ಪೊಲೀಸರು ಹುಡುಕಿದ್ದರು, ಆದರೆ ಇವನು ಕಾಣಿಸಿರಲಿಲ್ಲ. ಈ ಜಾಗದಲ್ಲಿ ರಾತ್ರಿ ವೇಳೆ ಆರು ಡಿಗ್ರಿ ಇದ್ದು, ಅತ್ಯಂತ ಕಷ್ಟಕರ ವಾತಾವರಣದಲ್ಲಿ ಬಾಲಕ ದಿನಕಳೆದಿದ್ದ ಎನ್ನಲಾಗಿದೆ.